ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಸೆರೆ
ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರು ಶಾಲಾ ವಿದ್ಯಾರ್ಥಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿಗಳಾದ ಇಬ್ಬರು ನಿನ್ನೆ ಬೆಳಿಗ್ಗೆ ಪೊಲೀಸ್ ಠಾಣೆ ಸಮೀಪ ವಾಹನ ನಿಲುಗಡೆಗೊಳಿಸುವ ಸ್ಥಳದಲ್ಲಿ ಅಡಗಿ ನಿಂತು ಗಾಂಜಾ ಬೀಡಿ ಸೇದುತ್ತಿದ್ದರು. ಈ ಬಗ್ಗೆ ಸಂಶಯಗೊಂಡ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್ಐ ಶ್ರೀಜೇಶ್, ಪೊಲೀಸರಾದ ವಿನೋದ್ ಕುಮಾರ್ ಹಾಗೂ ಗೋಕುಲ್ ವಿದ್ಯಾರ್ಥಿಗಳನ್ನು ಕಸ್ಟಡಿಗೆ ತೆಗೆದು ತಪಾಸಣೆಗೈದಾಗ ಇವರು ಗಾಂಜಾ ಬೀಡಿ ಸೇದುತ್ತಿರುವುದು ತಿಳಿದು ಬಂದಿದೆ. ಬಳಿಕ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಘಟನೆ ಕುರಿತು ಜುವೈನಲ್ ಜಸ್ಟೀಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.