ಗಾಂಜಾ ವಶ: ಎರಡು ಪ್ರಕರಣಗಳಲ್ಲಾಗಿ ಮೂವರ ಸೆರೆ

ಕುಂಬಳೆ: ಕುಂಬಳೆಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋ ಪದಂತೆ ಇಬ್ಬರನ್ನು ಸೆರೆಹಿಡಿದಿದೆ.

ಕುಂಬಳೆ ನಿತ್ಯಾನಂದ ಮಠ ಬಳಿ ನಿವಾಸಿ ಕೇತನ್ ಸಿ.ಕೆ (26) ಮತ್ತು ದೇವೀನಗರದ ಹರಿಕೃಷ್ಣನ್ (19) ಎಂಬಿವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ   ನೇತೃತ್ವದ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್), ಮುರಳಿ ಕೆ.ವಿ, ಗ್ರೇಡ್ ಪ್ರಿವೆಂಟೀವ್ ಆಫೀಸರ್ ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ವಿ, ಸೋನು ಸೆಬಾಸ್ಟಿಯನ್, ಶಿಜಿತ್ ವಿ.ವಿ, ಅತುಲ್ ಟಿ.ವಿ ಮತ್ತು ರೀನಾ ಎ ಎಂಬಿವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.ಇದೇ ರೀತಿ ಹೊಸದುರ್ಗ ಅಲಾಮಿಪಳ್ಳಿ ಹೊಸ ಬಸ್  ನಿಲ್ದಾಣ ಪರಿಸರದಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ವಿ.ವಿ ಪ್ರಸನ್ನ ಕುಮಾರ್  ನೇತೃತ್ವದ  ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ 14 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಪಯ್ಯನ್ನೂರು  ರಾಮಂತಳಿ ನಿವಾಸಿ ಅಸೀಫ್ ಕೆ.ಪಿ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

RELATED NEWS

You cannot copy contents of this page