ಗಾಂಜಾ ಸಹಿತ ಓರ್ವ ಸೆರೆ
ಕಾಸರಗೋಡು: ನೆಕ್ರಾಜೆ ಚೂರಿಪಳ್ಳದಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ಯು.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 10 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಚೂರಿಪಳ್ಳದ ನಿಶಾದ್ ಪಿ.ಎ. (27) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಸಿಇಒಗಳಾದ ಬಾಬು ವಿ. ರಾಜೇಶ್ ಪಿ, ಮುರಳೀಧರನ್, ಶ್ಯಾಮ್‌ಜಿತ್ ಎಂ. ಗೀತಾ ಟಿ.ವಿ ಹಾಗೂ ಧನ್ಯಾ ಟಿ.ವಿ. ಎಂಬವರು ಒಳಗೊಂಡಿದ್ದರು.