ಗಾಜಾದಲ್ಲಿ ಭೂ ದಾಳಿ ಆರಂಭಿಸಿದ ಇಸ್ರೇಲ್: ೬೦೦೦ ಮೀರಿದ ಸಾವಿನ ಸಂಖ್ಯೆ
ಗಾಜಾ: ಗಾಜಾದಲ್ಲಿ ವೈಮಾನಿಕ ದಾಳಿ ಆರಂಭಿಸಿದ ಇಸ್ರೇಲ್ ಇದೀಗ ಭೂ ಸೇನಾ ಪಡೆ ಬಳಸಿ ಭೂ ದಾಳಿ ಕಾರ್ಯಾಚರಣೆ ಆರಂಭಿಸಿದೆ. ಫಿರಂಗಿ ಟ್ಯಾಂಕರ್ ಇತ್ಯಾದಿಗಳೊಂ ದಿಗೆ ಗಾಜಾದೊಳಗೆ ಪ್ರವೇಶಿಸಿರುವ ಇಸ್ರೇಲ್ ಸೇನಾ ಪಡೆ ಗಾಜಾದ ಒಂದರ ಹಿಂದೆ ಒಂದರಂತೆ ಎಲ್ಲಾ ನಗರಗಳನ್ನೂ ತನ್ನ ಸ್ವಾಧೀನಪಡಿಸಿ ಅವುಗಳನ್ನು ಹಿಡಿತಕ್ಕೊಳಗಾಗಿಸಿ ಮುನ್ನುಗ್ಗುತ್ತಿಎಂದು ಅಲ್‌ಜೀರಾ ವರದಿ ಮಾಡಿದೆ.
ಇಸ್ರೇಲ್ ಟ್ಯಾಂಕರ್‌ಗಳು ಮತ್ತು ಫಿರಂಗಿಗಳು ಉತ್ತರ ಗಾಜಾ ಪಟ್ಟಿ ಪ್ರವೇಶಿಸಿ ಹಮಾಸ್ ಕೇಂದ್ರಗಳ ಮೇಲೆ ನಿರಂತರ ದಾಳಿ ಆರಂಭಿಸಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ೬ ಸಾವಿರದಷ್ಟು ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ.
ಗಾಜಾದಲ್ಲಿ ಹಮಾಸ್ ೨೨೨ ಇಸ್ರೇಲಿಗಳನ್ನು ಒತ್ತೆಯಾಳು ಗಳನ್ನಾಗಿರಿಸಿದೆ. ಇದರಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತಾಯಿ ಮತ್ತು ಪುತ್ರಿಯನ್ನು ಹಮಾಸ್ ಬಿಡುಗಡೆಗೊಳಿಸಿದೆ. ಹಮಾಸ್ ಒತ್ತೆಯಾಳಾಗಿರಿಸಿರುವ ನಮ್ಮ ಎಲ್ಲಾ ಪ್ರಜೆಗಳನ್ನೂ ಬಂಧಮುಕ್ತಿಗೊಳಿಸಿದ ಬಳಿಕ ಗಾಜಾದ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲಾಗುವು ದೆಂದು ಇಸ್ರೇಲ್ ಸೇನೆ ತಿಳಿಸಿದೆ.
ಶಸ್ತ್ರಸಜ್ಜಿತ ಮತ್ತು ಪದಾತಿದಳ ಬೆಟಾಲಿಯನ್‌ಗಳಿಂದ ಭೂದಾಳಿ ನಡೆಸಲಾಗುತ್ತಿದೆ. ಪದಾತಿ ದಳಗಳಿಂದ ದಾಳಿ ನಡೆಸಲಾಗುತ್ತಿದೆ. ಕಳೆದ ೨೪ ತಾಸುಗಳಲ್ಲಿಗಾಜಾ ಪಟ್ಟಿಯಲ್ಲಿ ಹಮಾಸ್‌ನ ೩೨೦ಕ್ಕೂ ಹೆಚ್ಚು ಮಿಲಿಟರಿ ಗುರಿಗಳನ್ನು ನಾಶಪಡಿಸಲಾಗಿದೆಯೆಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.