ಗಾಳಿ, ಮಳೆಗೆ ಪೈವಳಿಕೆ ವಿದ್ಯುತ್ ಇಲಾಖೆ ವ್ಯಾಪ್ತಿಯಲ್ಲಿ ಹಲವು ವಿದ್ಯುತ್ ಕಂಬಗಳಿಗೆ ಹಾನಿ

ಪೈವಳಿಕೆ: ಗಾಳಿ ಮಳೆಗೆ ಪೈವಳಿಕೆ ವಿದ್ಯುತ್ ಕಚೇರಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮರಗಳು ಬಿದ್ದು ಸುಮಾರು 20ರಷ್ಟು ವಿದ್ಯುತ್ ಕಂಬಗಳು ಹಾನಿಯಾಗಿದೆ. ಸಿಬ್ಬಂದಿಗಳ ಕಾಯÁðಚರಣೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಘಟನೆ ನಡೆದಿದೆ. ಮಂಡೆಕಾಪು ಬಳಿಯ ಪರಪ್ಪು ಎಂಬಲ್ಲಿ 10ರಷ್ಟು ಕಂಬಗಳು, ಲಾಲ್‌ಬÁಗ್ ಸಮೀಪದ ಕುಂಡೇರಿ, ಕನಿಯಾಲ ಸಹಿತ ವಿವಿಧ ಕಡೆಗಳಲ್ಲಿ ಸುಮಾರು 20ರಷ್ಟು ಕಂಬಗಳು ಮುರಿದು ಬಿದ್ದಿದೆ. ಮಾಹಿತಿ ತಿಳಿದು ಸಿಬ್ಬಂದಿಗಳು ಕೂಡಲೇ ಸ್ಥಳಗಳಿಗೆ ತಲುಪಿ ವಿದ್ಯುತ್ ವಿಚ್ಚೇದಿsಸಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಮರಗಳನ್ನು ಕಡಿದು ತೆರವುಗೊಳಿಸಲಾಗಿದೆ.

RELATED NEWS

You cannot copy contents of this page