ಮಂಜೇಶ್ವರ: ಬೆಂಗಳೂರಿನ ರಂಗಮAಡಲ ಹಾಗೂ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಜು.27 ರಂದು ಬೆಳಿಗ್ಗೆ 10ರಿಂದ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕೃತಿ ಯಾನ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರ್ವಾಧ್ಯಕ್ಷತೆ ವಹಿಸುವರು. ಕವಯಿತ್ರಿ ಡಾ.ಕೆ.ವಿ.ಸಿಂಧು ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್, ಎಡಿಎಂ ಅಖಿಲ್ ಪಿ., ಕೆ.ವಿ.ಕುಂಞÂ ರಾಮನ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕ ನುಡಿವರು. ಗಿಳಿವಿಂಡು ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್, ಕಲಾವಿದೆ ನಿರ್ಮಲಾ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿರುವರು.
ಬಳಿಕ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕೃಷ್ಣನ್ ನಡುವಲತ್ತ್ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಆಶಯ ನುಡಿಗಳನ್ನಾಡುವರು. ವಿವಿಧ ಕವಿಗಳು ಭಾಗವಹಿಸುವರು. ಅಪರಾಹ್ನ 1.30ರಿಂದ ನಡೆಯಲಿರುವ ‘ಕನ್ನಡ ಮತ್ತು ಮಲೆಯಾಳದ ನಡುವಿನ ಸೇತುವೆ ಯಾವುದು?’ ಸಂವಾದದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಮಾನಂದ ಬನಾರಿ, ವಿದ್ವಾಂಸ ಕೆ.ವಿ.ಕುಮಾರನ್ ಭಾಗವಹಿಸುವರು. ಪತ್ರಕರ್ತ ಜಿ.ಎನ್.ಮೋಹನ್ ಸಮನ್ವಯಕಾರರಾಗಿರುವರು.
ಎರಡನೇ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ವಿಶಾಲಾಕ್ಷ ಪುತ್ರಕಳ ಆಶಯ ನುಡಿಗಳನ್ನಾಡುವರು. ವಿವಿಧ ಕವಿಗಳು ಕವನ ವಾಚನಗೈಯ್ಯುವರು. ಸಂಜೆ 4ರಿಂದ ದಿವಾಕರ ಪಿ.ಅಶೋಕನಗರ, ಸಿ.ಎಂ.ನರಸಿAಹಮೂರ್ತಿ ಚಾಮರಾಜನಗರ ಅವರಿಂದ ಭಾವ-ಜಾನಪದ-ಗೀತ ಗಾಯನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಮಾರೋಪ ಭಾಷಣ ಮಾಡುವರು. ಡಾ.ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿರುವರು. ಶಾಸಕ ಸಿ.ಎಚ್.ಕುಞ್ಞಂಬು, ಮಂಜೇಶ್ವರ ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಪ್ರಾಧ್ಯಾಪಕ ಶಿವಶಂಕರ್ ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಮಂಜೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ರಾಮಚಂದ್ರ, ಕಲಾವಿದ ನರಸಿಂಹ ಬಲ್ಲಾಳ್ ಉಪಸ್ಥಿತರಿರುವರು. ಕಮಲಾಕ್ಷ ಡಿ, ಸಂತೋಷ್ ಕುಮಾರ್ ಕೆ., ಕಮಲಾಕ್ಷ ಕನಿಲ, ವನಿತಾ ಆರ್.ಶೆಟ್ಟಿ ಸಹಕರಿಸುವರು.
