ಗುಂಡು ತಗಲಿ ಮಾವೋವಾದಿ ನಾಯಕಿ ಸಾವನ್ನಪ್ಪಿರುವುದಾಗಿ ಪೋಸ್ಟರ್ ಪ್ರತ್ಯಕ್ಷ

ಕಣ್ಣೂರು: ಕಣ್ಣೂರು ಜಿಲ್ಲೆಯ  ನೆಟ್ಟಿತ್ತೋಟಿನಲ್ಲಿ ಕೇರಳ ಪೊಲೀಸ್ ಇಲಾಖೆಯ ತಂಡರ್ ಬೋಲ್ಟ್ ಮತ್ತು ಮಾವೋವಾದಿಗಳ ಮಧ್ಯೆ ನವಂಬರ್ ೧೩ರಂದು ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ನಾಯಕಿ ಮೂಲತಃ ಕರ್ನಾಟಕ ನಿವಾಸಿ ಕವಿತಾ (ಲಕ್ಷ್ಮಿ) ಸಾವನ್ನಪ್ಪಿರುವುದಾಗಿ ಬರೆದ ಪೋಸ್ಟರ್‌ವೊಂದು ಇಂದು ಬೆಳಿಗ್ಗೆ ತಿರುವಲ್ಲಾ ದಲ್ಲಿ ಪ್ರತ್ಯಕ್ಷಗೊಂಡಿದೆ. ಮಾವೋವಾದಿ ಪಶ್ಚಿಮಘಟ್ಟದ ವಿಶೇಷ ವಲಯ ಸಮಿತಿ ಹೆಸರಲ್ಲಿ ಈ ಪೋಸ್ಟರ್ ಲಗತ್ತಿಸಲಾಗಿದೆ. ಆದರೆ  ಕವಿತಾ ಸಾವಿನ ಬಗ್ಗೆ ನಮಗೇನೂ ಮಾಹಿತಿ ಲಭಿಸಿಲ್ಲವೆಂದೂ ಪೋಸ್ಟರ್ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page