ಗುರುವಾಯೂರು ಕ್ಷೇತ್ರದಲ್ಲಿ ಸೆ.8ರಂದು ದಾಖಲೆಯ 330 ವಿವಾಹ ನೋಂದಣಿ

ತೃಶೂರು: ದಾಖಲೆ ಸಂಖ್ಯೆಯ ವಿವಾಹಕ್ಕೆ ಗುರುವಾಯೂರು ಕ್ಷೇತ್ರ ಸಿದ್ಧವಾಗುತ್ತಿದೆ. ಈ ತಿಂಗಳ 8ರಂದು ಇದುವರೆಗೆ 330 ವಿವಾಹ ನಡೆಸಲು ಮುಂಗಡವಾಗಿ ನೋಂದಾಯಿಸಲಾಗಿದೆ. 7ರಂದು ಮಧ್ಯಾಹ್ನ 12 ಗಂಟೆವರೆಗೆ ನೇರವಾಗಿ  ಬುಕ್ಕಿಂಗ್ ನಡೆಸಬಹುದಾಗಿದ್ದು, ವಿವಾಹವಾಗುವವರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಅಂದಾಜಿಸಲಾಗಿದೆ. 227 ಜೋಡಿಗಳ ವಿವಾಹ ಇಲ್ಲಿ ಇದುವರೆಗಿನ ದಾಖಲೆಯಾಗಿತ್ತು. ಓಣಂ ಹಬ್ಬಕ್ಕೆ ಮುಂಚಿತವಾಗಿ ಬರುವ ಆದಿತ್ಯವಾರವೆಂಬ ಪ್ರತ್ಯೇಕತೆಯೂ ಸೆ.7ಕ್ಕಿದ್ದು, ರಾಜ್ಯದಲ್ಲಿ ಅತ್ಯಂತ ಹೆಚ್ಚು ವಿವಾಹ ನಡೆಯುವ ಕ್ಷೇತ್ರಗಳಲ್ಲಿ ಗುರುವಾಯೂರು ಒಂದಾಗಿದೆ.

You cannot copy contents of this page