ಗುಳಿಗ ಬನದ ಪರಿಸರ ಮಲಿನಗೊಳಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಪ್ಪಳ: ಗುಳಿಗಬನದ ಪರಿಸರವನ್ನು ಮಲಿನಗೊಳಿಸಿದ ಪ್ರಕರಣದಲ್ಲಿ ತಲೆರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಉಪ್ಪಳ ಹಿದಾಯತ್ ನಗರ ಆಟೋರಿಕ್ಷಾ ಚಾಲಕ ಮುಹಮ್ಮದ್ ಸಿರಾಜ್ (33) ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. 2012 ನವೆಂಬರ್ 20ರಂದು ಘಟನೆ ನಡೆದಿದೆ. ಉಪ್ಪಳ ಸೋಂಕಾಲ್‌ನ ಗುಳಿಗಬನದ ಪಡಿಪ್ಪಿರೆಯನ್ನು ಮಲಿನಗೊಳಿಸಿದ  ಪ್ರಕರಣದಲ್ಲಿ  ಕೇಸು ದಾಖಲಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ನವೆಂಬರ್ ೨೧ರಂದು ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನಲ್ಲಿ ಹೊರ ಬಂದ ಈತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ವ್ಯಾಪಕ ತಪಾಸಣೆ ನಡೆಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈತನನ್ನು ತಲೆಮರೆಸಿಕೊಂಡ ಆರೋಪಿಯಾಗಿ ನ್ಯಾಯಾಲಯ ಘೋಷಿಸಿತ್ತು. 13 ವರ್ಷದಿಂದ ತಲೆಮರೆಸಿ ಜೀವಿಸುತ್ತಿದ್ದ ಆರೋಪಿ ಮನೆಯಲ್ಲಿದ್ದಾನೆ ಎಂಬ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಸೆರೆ ಹಿಡಿದಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

RELATED NEWS

You cannot copy contents of this page