ಗೂಗಲ್ ಮ್ಯಾಪ್ ನೋಡಿ ಚಲಾಯಿಸಿದ ಕಾರು ಹೊಳೆಗೆ ಬಿದ್ದು ಇಬ್ಬರು ಅಪಾಯದಿಂದ ಪಾರು
ಅಡೂರು: ಗೂಗಲ್ ಮ್ಯಾಪ್ ನೋಡಿ ಚಲಾಯಿಸಿದ ಕಾರು ಪಳ್ಳಂಜಿ ಅರಣ್ಯದೊಳಗಿನ ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದ ಅಂಬಲತ್ತರ ನಿವಾಸಿಗಳಾದ ಇಬ್ಬರು ಅದೃಷ್ಟವಶಾತ್ ಅಪಾಯ ದಿಂದ ಪಾರಾಗಿದ್ದಾರೆ. ಕುತ್ತಿಕ್ಕೋಲ್ ನಿಂದ ಪಾಂಡಿಗೆ ಅರಣ್ಯದೊಳಗೆ ತೆರಳುವ ರಸ್ತೆಯಲ್ಲಿ ಪಳ್ಳಂಜಿ ಹೊಳೆಯ ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದೆ. ಕಾಞಂಗಾಡ್, ಅಂಬಲ ತ್ತರದಿಂದ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದ ಏಳನೇ ಮೈಲು ಅಂಜಿಲತ್ತ್ ಹೌಸ್‌ನ ತಸ್ರೀಫ್ (36), ಪುಲ್ಲೂರು ಮುನ್ನಂಬಂ ಹೌಸ್‌ನ ಅಬ್ದುಲ್ ರಶೀದ್ (35) ಎಂಬಿವರು ಅಪಘಾತಕ್ಕೀಡಾಗಿದ್ದಾರೆ. ಅರಣ್ಯದೊಳಗಿರುವ ಹಳೆಯ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ದರಿಂದ ಹೊಳೆಗೆ ಆವರಣ ಇಲ್ಲದಿರುವುದು ಇವರ ಗಮನಕ್ಕೆ ಬಂದಿರಲಿಲ್ಲ. ಇದರಿಂದ ಹೊಳೆಗೆ ಬಿದ್ದ ಕಾರು ಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಈವೇಳೆ ಅತೀ ಸಾಹಸದಿಂದ ಹೊರಗೆ ಬಂದ ತಸ್ತೀಫ್ ಹಾಗೂ ಅಬ್ದುಲ್ ರಶೀದ್ ಹೊಳೆ ಬದಿಯ ಒಂದು ಮರವನ್ನು ಹಿಡಿದು ಬಳಿಕ ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಕುತ್ತಿಕ್ಕೋಲ್‌ನಿಂದ ಅಗ್ನಿಶಾಮಕದಳ ಹಾಗೂ ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಈ ಇಬ್ಬರನ್ನು ರಕ್ಷಿಸಿದ್ದಾರೆ. ವಿಷಯ ತಿಳಿದು ಹಲವು ಮಂದಿ ಸ್ಥಳಕ್ಕೆ ತಲುಪಿದ್ದರು.