ಕಲ್ಲಿಕೋಟೆ: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗೆಳೆಯನನ್ನು ನೋಡಲೆಂದು ತಲುಪಿದ ಯುವಕ ಕ್ಯಾಂಟೀನ್‌ನಲ್ಲಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟರು. ತಿರುವಂಬಾಡಿ ನಿವಾಸಿ ಚವಲಪ್ಪಾರ ಅಬಿನ್ ವಿನು (27) ಮೃತಪಟ್ಟವರು. ಕೂಡರಞಿ ಸೈಂಟ್ ಜೋಸೆಫ್ ಆಸ್ಪತ್ರೆಯ ಕ್ಯಾಂಟಿನ್‌ನಲ್ಲಿ ವಿದ್ಯುತ್ ಶಾಕ್ ತಗಲಿ ದುರಂತ ಸಂಭವಿಸಿದೆ. ನಿನ್ನೆ ರಾತ್ರಿ 10.30ರ ವೇಳೆ ಘಟನೆ ನಡೆದಿದೆ.
ಗೆಳೆಯನನ್ನು ನೋಡಲೆಂದು ಆಸ್ಪತ್ರೆಗೆ ಅಬಿನ್ ವಿನು ತಲುಪಿದ್ದರು. ಈ ವೇಳೆ ದುರಂತ ಸಂಭವಿಸಿದ್ದು, ಮೃತದೇಹವನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜ್‌ನಲ್ಲಿಡಲಾಗಿದೆ.
 
								 
															




