ಗೆಳೆಯನ ತಂದೆಗೆ ರಕ್ತದಾನ ಮಾಡಿದ ಮರುಕ್ಷಣ ಯುವಕ ಹೃದಯಾಘಾತದಿಂದ ನಿಧನ

ಕೊಲ್ಲಂ: ಗೆಳೆಯನ ತಂದೆಯ ಜೀವ ಉಳಿಸಲು ರಕ್ತದಾನ ಮಾಡಿದ ಮರು ಕ್ಷಣದಲ್ಲೇ ಹೃದಯಾಘಾತದಿಂದ ಯುವಕ ಮೃತಪಟ್ಟನು. ಪುನಲೂರು ಮಣಿಯಾರ್ ಪರವಟ್ಟಂ ಮಹೇಶ್ ಭವನ್ ನಿವಾಸಿ ದಿ| ಮನೋಹರ- ಶ್ಯಾಮಳ ದಂಪತಿ ಪುತ್ರ ಮಹೇಶ್ (36) ಮೃತಪಟ್ಟ ಯುವಕ. ಪುನಲೂರು ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಪುನಲೂರು ತಾಲೂಕು ಆಸ್ಪತ್ರೆಯ ಪಾಲಿಯೇಟಿವ್ ಕೇರ್ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಗೆಳೆಯನ ತಂದೆಗೆ ರಕ್ತದಾನ ಮಾಡಲು ಮಹೇಶ್ ಆಸ್ಪತ್ರೆಗೆ ತಲುಪಿದ್ದರು. ರಕ್ತ ಸಂಗ್ರಹದ ಮುಂಚಿತ ಯುವಕನನ್ನು ವೈದ್ಯಾಧಿಕಾರಿ ಗಳು ಪರಿಶೀಲಿಸಿದ್ದರು. ಆದರೆ ಯಾವುದೇ ಸಮಸ್ಯೆ ಕಂಡು ಬರದ ಹಿನ್ನೆಲೆಯಲ್ಲಿ ರಕ್ತ ಸ್ವೀಕರಿಸಲಾಗಿತ್ತು. ರಕ್ತದಾನ ಮಾಡಿ  ತಂಪು ಪಾನೀಯ ಕುಡಿದ ಕ್ಷಣದಲ್ಲೇ ಯುವಕನಿಗೆ ಎದೆನೋವು ಕಂಡು ಬಂದಿತ್ತು. ಗ್ಯಾಸ್ ಟ್ರಬಲ್ ಆಗಿರಬಹು ದೆಂದು ಶಂಕಿಸಿ ಆಸ್ಪತ್ರೆಯ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಇಸಿಜಿ ತೆಗೆದಾಗ ಅಲ್ಪ ವ್ಯತ್ಯಾಸ ಕಂಡು ಬಂದಿದ್ದು, ಕೂಡಲೇ ಐಸಿಯುವಿಗೆ ದಾಖಲಿಸಲಾ ಯಿತು. ಗಂಟೆಗಳ ಕಾಲ ಅಲ್ಲಿ ಚಿಕಿತ್ಸೆ ನೀಡಲಾ ಯಿತಾದರೂ ಬಳಿಕ ಸಾವು ಸಂಭವಿಸಿದೆ. ಮೃತ ಯುವಕ ಪತ್ನಿ ಸುಜಿತ, ಅಭಿನವ್, ಅರ್ಪಿತ, ಐಶ್ವರ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page