ಗ್ಯಾಸ್ ಸಿಲಿಂಡರ್‌ನ ಪೈಪ್ ತೆರೆದಿಟ್ಟು ಕಿಚ್ಚಿರಿಸಿದ ಮನೆಯೊಡೆಯ ನೇಣು ಬಿಗಿದು ಆತ್ಮಹತ್ಯೆ: ಪತ್ನಿ ಸುಟ್ಟು ಸಾವು

ಕೊಚ್ಚಿ: ಅಂಗಮಾಲಿಯಲ್ಲಿ ಮನೆಗೆ ಕಿಚ್ಚಿರಿಸಿದ ಬಳಿಕ ಮನೆಯೊಡೆಯ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಮನೆಯೊಳಗೆ ನಿದ್ರಿಸುತ್ತಿದ್ದ ಪತ್ನಿ ಬೆಂಕಿ ತಗಲಿ ಮೃತಪಟ್ಟರು. ಗಂಭೀರ ಗಾಯಗೊಂಡ ಇಬ್ಬರು ಮಕ್ಕ ಳನ್ನು ಎರ್ನಾಕುಳಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ. ಪುಳಿಯನಂ ನಿವಾಸಿ ಎಚ್. ಶಶಿ, ಪತ್ನಿ ಸುಮಿ ಸನಲ್ ಎಂಬಿವರು ಮೃತಪಟ್ಟವರಾಗಿದ್ದಾರೆ.

ಮನೆಯೊಳಗೆ ಗ್ಯಾಸ್ ಸಿಲಿಂಡರ್‌ನ ಪೈಪ್ ತೆರೆದಿಟ್ಟು ಕಿಚ್ಚಿರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಶಿಯನ್ನು ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆರ್ಥಿಕ ಸಂದಿಗ್ಧತೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಗೈಯ್ಯುತ್ತಿರುವು ದಾಗಿ ಶಶಿ ಬರೆದಿಟ್ಟ ಪತ್ರ ಲಭಿಸಿದೆ. ಮೃತದೇಹಗಳನ್ನು ಪೋಸ್ಟ್‌ಮಾರ್ಟಂಗೆ ಕೊಂಡೊಯ್ಯಲಾಗಿದೆ. ಗಾಯಗೊಂಡ ಇಬ್ಬರು ಮಕ್ಕಳು ಕೂಡಾ ಗಂಭೀರ ಸ್ಥಿತಿಯಲ್ಲಿದ್ದಾರೆ.

You cannot copy contents of this page