ಘರ್ಷಣೆ: ಗಾಯಗೊಂಡ ಇಬ್ಬರೂ ಮೃತ್ಯು

ತೃಶೂರು: ಇಲ್ಲಿನ ಮೂರ್ಕ ನಾಡುನಲ್ಲಿ ನಡೆಯುತ್ತಿದ್ದ ಉತ್ಸವದ ಮಧ್ಯೆ ಘರ್ಷಣೆ ಉಂಟಾಗಿ ಇರಿತದಿಂದ ಗಾಯಗೊಂಡಿದ್ದ ಇಬ್ಬರು ಮೃತಪಟ್ಟರು. ಆನಂದಪುರ ನಿವಾಸಿ ಸಂತೋಷ್ ಮೃತಪಟ್ಟ ವ್ಯಕ್ತಿ. ಘರ್ಷಣೆಯಲ್ಲಿ ಅರಿಂಬೂರು ಚುಳ್ಳಿಪರಂಬಿಲ್ ಅಕ್ಷಯ್ ಘಟನೆ ನಡೆದಂದೇ ಮೃತಪಟ್ಟಿದ್ದರು.  ಬುಧವಾರ ರಾತ್ರಿ ೭.೩೦ರ ವೇಳೆ ಮೂರ್ಕನಾಡ್ ಶಿವಕ್ಷೇತ್ರದ ಉತ್ಸವ ದಂಗವಾಗಿರುವ ಸುಡುಮದ್ದು ಪ್ರದರ್ಶನದ ಬೆನ್ನಲ್ಲೇ ಆಲುಪರಂಬಿಲ್‌ನಲ್ಲಿ ಘರ್ಷಣೆ ಸೃಷ್ಟಿಯಾಗಿದೆ. ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಅಕ್ಷಯ್‌ನ ಎದೆಗೆ ಇರಿತ ಉಂಟಾಗಿದೆ. ಇದಲ್ಲದೆ ಐದು ಮಂದಿಗೆ ಇರಿತದಿಂದ ಗಾಯವಾಗಿದೆ.

You cannot copy contents of this page