ಚಿಕಿತ್ಸೆಯಲ್ಲಿದ್ದ ಸಾಮಾಜಿಕ ಕಾರ್ಯಕರ್ತ ನಿಧನ

ಪೈವಳಿಕೆ: ಸಾಮಾಜಿಕ ಕಾರ್ಯಕರ್ತ, ಕೂಲಿ ಕಾರ್ಮಿಕ ಚಿಪ್ಪಾರ್ ನಿವಾಸಿ ಹಮೀದ್ ಸಿ.ಎಸ್ (44) ಮಂಗಳವಾರ ರಾತ್ರಿ ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರು ಸಿಪಿಎಂ, ಡಿವೈಎಫ್‌ಐ ಸಕ್ರೀಯ ಕಾರ್ಯಕರ್ತ ಹಾಗೂ ಜನಶಕ್ತಿ ಕ್ಲಬ್ ಚಿಪ್ಪಾರ್ ಇದರ ಸದಸ್ಯ, ಅಂತರುಲ್ಲು ಇಸ್ಲಾಮ್ ಎಂಗ್ ಮೆನ್ ಅಸೋಶಿಯೇಶನ್ ಚಿಪ್ಪಾರ್ ಇದರ ಪ್ರಧಾನ ಕಾರ್ಯದರ್ಶಿ, ಚಿಪ್ಪಾರ್ ಜುಮಾ ಮಸೀದಿ ಸಮಿತಿ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಖೆÊರುನೀಸ, ಮಕ್ಕಳಾದ ಆದಿಲ್, ಅಸ್ಲಾನ್, ಹಯಾನ, ಸಹೋದರ ಮೊಹಮ್ಮದ್.ಸಿ, ಸಹೋದರಿಯ ರಾದ ಫಾತಿಮ್ಮ, ಐಶಾಭಿ, ನೆಬೀಸ, ಅವ್ವಮ್ಮ, ಮರಿಯಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಅಬ್ದುಲ್ ರಹಿಮಾನ್, ತಾಯಿ ಆಸ್ಯಮ್ಮ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ವಿನಯ ಕುಮಾರ್ ಬಾಯಾರ್, ನೇತಾರರಾದ ನಾರಾಯಣ ಶೆಟ್ಟಿ, ಚಂದ್ರ ನಾಯ್ಕ್ ಮಾನಿಪ್ಪಾಡಿ, ಕಲೀಲ್ ನಾರ್ನಕಟ್ಟ, ಶ್ರೀನಿವಾಸ ಭಂಡಾರಿ, ಸುಂದರ ಬೀಡುಬೈಲ್, ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ಲ.ಕೆ, ವಾರ್ಡ್ ಸದಸ್ಯೆ ರಹಮತ್ ರಹಿಮಾನ್, ಪಕ್ಷದ ಲೋಕಲ್ ಸಮಿತಿ ಸದಸ್ಯರು, ಬ್ರಾಂಚ್ ಸದಸ್ಯರು ಹಾಗೂ ವಿವಿಧ ರಾಜಕೀಯ, ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಚಿಪ್ಪಾರ್ 1ನೇ ಬ್ರಾಂಚ್ ಸಮಿತಿ, ಕಾಯರ್‌ಕಟ್ಟೆ ಬ್ರಾಂಚ್ ಸಮಿತಿ, ಮಾನಿಪ್ಪಾಡಿ ಶಾಖಾ ಸಮಿತಿ , ಡಿವೈಎಫ್‌ಐ , ಎಸ್.ಎಫ್.ಐ, ಸಿಐಟಿಯು, ಮಹಿಳಾ ಅಸೋಸಿಯೇ ಶನ್ ಘಟಕಗಳು, ಭಗತ್‌ಸಿಂಗ್ ಯುವ ಕಲಾವೇದಿ ಮಾನಿಪ್ಪಾಡಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page