ಚಿನ್ನಾಭರಣ ರಿಕವರಿ ಹೆಸರಲ್ಲಿ ಪೊಲೀಸ್, ಕಳ್ಳರು ಸೇರಿ ಚಿನ್ನ ವ್ಯಾಪಾರಿಗಳನ್ನು ದ್ರೋಹಿಸುತ್ತಿದ್ದಾರೆ-ಗೋಲ್ಡ್, ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಶನ್

ಕಾಸರಗೋಡು: ಕಾನೂನು ರೀತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಚಿನ್ನಾಭರಣ ವ್ಯಾಪಾರಿಗಳಿಗೆ ರಿಕವರಿ ಹೆಸರಲ್ಲಿ ಪೊಲೀಸರು ಕಿರುಕುಳ ನೀಡುತ್ತಿರುವುದಾಗಿ ಆಲ್ ಕೇರಳ ಗೋಲ್ಡ್ ಆಂಡ್ ಸಿಲ್ವರ್ ಮರ್ಚೆಂ ಟ್ಸ್ ಅಸೋಸಿಯೇಶನ್ ಜಿಲ್ಲಾ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಕಳ್ಳರನ್ನು ಜ್ಯುವೆಲ್ಲರಿಗೆ ಕರೆದು ಕೊಂಡು ಬರುವ ಪೊಲೀಸರು ಕಳವುಗೈದ ಸೊತ್ತುಗಳಾಗಿವೆಯೆಂದು ತಿಳಿಸಿ ಚಿನ್ನಾಭರಣಗಳನ್ನು ವಶಪಡಿಸುತ್ತಿದ್ದು, ಚಿನ್ನಾಭರಣ ನೀಡಲು ಹಿಂಜರಿದರೆ ಅವರನ್ನು ಆರೋಪಿಗಳಾಗಿ ಕೇಸು ದಾಖಲಿಸಲು ಪೊಲೀಸರು ಪ್ರಯತ್ನಿಸುತ್ತಿ ದ್ದಾರೆ. ಇದೇ ವೇಳೆ ಜ್ಯುವೆಲ್ಲರಿಯಿಂದ ಬದಲಾಯಿಸಿ ಕೊಂಡೊಯ್ದ ಚಿನ್ನಾ ಭರಣಗಳನ್ನು ಆರೋಪಿಗಳಿಂದ ವಶಪಡಿಸಲು ಯಾವುದೇ ಕ್ರಮ ಪೊಲೀಸರು ಕೈಗೊಳ್ಳುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಭಾರೀ ಆರ್ಥಿಕ ನಷ್ಟವುಂಟುಮಾಡುತ್ತಿದೆಯೆಂದೂ ವ್ಯಾಪಾರಿಗಳು ತಿಳಿಸಿದ್ದಾರೆ.

ಒಂದು ಪ್ರಕರಣಕ್ಕೆ ಸಂಬಂಧಿಸಿ ರಿಕವರಿ ಮಾಡಿದ ಚಿನ್ನಾಭರಣಗಳನ್ನು ಬೇರೊಂದು ಪ್ರಕರಣದ ಸೊತ್ತುಗಳಾಗಿ ತಿಳಿಸಲು ಪೊಲೀಸರು ಯತ್ನಿಸುತ್ತಿರುವುದಾಗಿಯೂ ಅವರು ಆರೋಪಿಸಿದ್ದಾರೆ.

ಮರ್ಚೆಂಟ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್, ಗೋಲ್ಡ್ ಆಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಕೆ.ಎಂ. ಅಬ್ದುಲ್ ಕರೀಂ, ಕಾರ್ಯದರ್ಶಿ ಕೋಡೋತ್ ಅಶೋಕನ್ ನಾಯರ್, ಕೋಶಾಧಿಕಾರಿ ಬಿ.ಎಂ. ಅಬ್ದುಲ್ ಕಬೀರ್, ರೋಯ್ ಜೋಸೆಫ್, ಅಬ್ದುಲ್ ಹಮೀದ್, ಜಿ.ವಿ. ನಾರಾಯಣನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

RELATED NEWS

You cannot copy contents of this page