ಚುನಾವಣಾ ಪ್ರಚಾರಕ್ಕಾಗಿ ನೀಡಲಾದ ನಿಧಿಯನ್ನು ಕೆಲವು ಕಾಂಗ್ರೆಸ್ ನೇತಾರರು ಗುಳುಂಕರಿಸಿದ್ದಾರೆ-ರಾಜ್‌ಮೋಹನ್ ಉಣ್ಣಿತ್ತಾನ್

ಕಾಸರಗೋಡು: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬೂತ್ ಗಳಿಗೆ ನೀಡಲಾದ ಆರ್ಥಿಕ ನಿಧಿಯನ್ನು ಕೆಲವು ಮಂಡಲ ನೇತಾರರು ಗುಳುಂಕರಿಸಿರುವುದಾಗಿ ಯುಡಿಎಫ್ ಉಮೇದ್ವಾರ, ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಲು ಕಾಂಗ್ರೆಸ್‌ನ ಕೆಲವು ಸ್ಥಳೀಯ ನೇತಾರರು ಯತ್ನಿಸಿದ್ದಾರೆಂಬ ಆರೋಪವನ್ನು ಉಣ್ಣಿತ್ತಾನ್ ಕೆಲವು ದಿನಗಳ ಹಿಂದೆಯಷ್ಟೇ ಹೊರಿಸಿದ್ದರು.  ಅದರ ಬೆನ್ನಲ್ಲೇ ಚುನಾವಣಾ ನಿಧಿ ಅವ್ಯವಹಾರದ ಆರೋಪದೊಂದಿಗೂ ಅವರು ಈಗ ರಂಗಕ್ಕಿಳಿದಿದ್ದಾರೆ.

ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ದಿ| ಪಿ. ಗಂಗಾಧರನ್ ನಾಯರ್‌ರ ಸಂಸ್ಮರಣಾ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರು ಈ ಆರೋಪ ಹೊರಿಸಿ ದ್ದಾರೆ. ಪ್ರಸ್ತುತ ಸಂಸ್ಮರಣಾ  ಸಭೆಯಲ್ಲಿ ಯುಡಿಎಫ್ ರಾಜ್ಯ ಸಂಚಾಲಕ ಎಂ.ಎಂ. ಹಸ್ಸನ್ ಕೂಡಾ ಭಾಗವಹಿ ಸಿದ್ದರು. ಅವರ ಸಮ್ಮುಖದಲ್ಲೇ ಸಂಸದರು ಇಂತಹ ಆರೋಪ ಮಾಡಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ನಾನು ಬೂತ್ ಸಮಿತಿಗಳಿಗೆನೀಡಿದ ಹಣವನ್ನು ಕೆಲವು ಪಕ್ಷದ ನೇತಾರರು ಲಪಟಾಯಿಸಿದ್ದಾರೆ. ಹೀಗೆ ಲಪಟಾಯಿಸಿರುವುದು ಯಾರೆಂಬುವುದು ನನಗೆ ಚೆನ್ನಾಗಿಯೇ ತಿಳಿದಿದೆ. ಪಕ್ಷದ ಮಂಡಲ ಮತ್ತು ಬ್ಲೋಕ್ ಅಧ್ಯಕ್ಷರಿಗೆ ಚುನಾವಣಾ ಪ್ರಚಾರಕ್ಕಾಗಿ ಅಗತ್ಯವಿರುವಷ್ಟು ಹಣ ನೀಡಲಾಗಿದೆ.  ಇದು ಯುಡಿಎಫ್ ಚುನಾವಣಾ ನಿಧಿಯಿಂದ ನೀಡಲಾದ ಹಣವಾಗಿ ದೆ. ಬೂತ್ ಸಮಿತಿಗಳಿಗೆ ನೀಡಲಾದ ಹಣ ಬೂತ್‌ಗಳಿಗೇ ಸೇರಿದಾಗಿದೆ. ಅದನ್ನು ಲಪಟಾಯಿ ಸಲು ಯಾರಿಗೂ ಆಸ್ಪದ ನೀಡಲಾ ಗುವುದಿಲ್ಲವೆಂದೂ ಸಂಸದರು ಹೇಳಿದ್ದಾರೆ.

RELATED NEWS

You cannot copy contents of this page