ಚೆಂಗಳದಿಂದ ನಾಪತ್ತೆಯಾಗಿದ್ದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚೆಂಗಳದಿಂದ ನಾಪತ್ತೆಯಾಗಿದ್ದ ಯುವಕ ಬೆಂಗಳೂರಿನ ವಸತಿ ಗೃಹವೊಂದರ ಕೊಠಡಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಚೆಂಗಳ ಸಂತೋಷ್ ನಗರ ಮಸೀದಿಗೆ ಸಮೀಪದ ನಿವಾಸಿಗಳಾದ ಮುಹಮ್ಮದ್ ಕುಂಞಿ ಸಾಹಿದ ದಂಪತಿ ಮಗ ಅಬಾಷರ್ ಅಬ್ಬಾಸ್ (24) ಸಾವನ್ನಪ್ಪಿದ ಯುವಕ.

ವಿದ್ಯಾನಗರದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಎದುರುಗಡೆ ರಸ್ತೆ ಬದಿ ಅಬಾಷರ್ ಅಬ್ಬಾಸ್ ತನ್ನ ಸ್ನೇಹಿತನೋರ್ವನ ಪಾಲುದಾರಿಕೆಯಲ್ಲಿ ಗೂಡಂಗಡಿಯೊಂದನ್ನು ನಡೆಸುತ್ತಿದ್ದನು. ಕಳೆದ ಮೇ ೩೧ರಂದು ಮನೆಯಿಂದ ಹೊರ ಹೋದ ಆತ ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಆ ಬಗ್ಗೆ ಮನೆಯವರು ವಿದ್ಯಾನಗರ ಪೊಲೀಸರಿಗೆ ದೂರನ್ನು ನೀಡಿದ್ದರು.ಈ ಮಧ್ಯೆ ಅಬಾಷರ್ ಕಳೆದ ಶುಕ್ರವಾರದಂದು ಬೆಂಗಳೂರಿಗೆ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದನೆಂದು ತಿಳಿದು ಬಂದಿದೆ. ಬಳಿಕ ಅಲ್ಲಿ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ವಿಷಯ ತಿಳಿದ ಆತನ ಮನೆಯವರು ಮತ್ತು ವಿಗ್ಯಾನಗರ ಪೊಲೀಸರು ನಿನ್ನೆ ಬೆಂಗಳೂರಿಗೆ ಸಾಗಿ ನಡೆಸಿದ ತನಿಖೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ. ಅಬಾಷರ್ ಆಗಿರುವುದಾಗಿ ಗುರುತು ಹಚ್ಚಿದ್ದಾರೆ. ಮೃತದೇಹವನ್ನು ಬಳಿಕ  ಊರಿಗೆ ತರಲಾಯಿತು. ಮೃತ ಯುವಕ ಹೆತ್ತವರ ಹೊರತಾಗಿ ಸಹೋದರಿಯರಾದ ಫಸೀಲಾ, ಅಫೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page