ಚೆಂಬರಿಕದಲ್ಲಿ ತೆಂಗು ಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ

ಕಾಸರಗೋಡು: ಮೇಲ್ಪರಂಬ, ಚೆಂಬರಿಕದಲ್ಲಿ ತೆಂಗು ತುಂಡಾಗಿ ಬಿದ್ದು ನಾಲ್ಕು ವಿದ್ಯುತ್  ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿದೆ.  ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವಕನ ಕಾಲಿಗೆ ಗಂಭೀರ ಗಾಯ ಉಂಟಾಗಿದೆ. ಈ ಮಧ್ಯೆ ಆ ದಾರಿಯಲ್ಲಿ ಸಂಚರಿಸಿದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ರಸ್ತೆಯ ಆವರಣ ಗೋಡೆಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಿಗ್ಗೆ 6.30ರ ವೇಳೆ ಘಟನೆ ನಡೆದಿದೆ. ಮಕ್ಕಳನ್ನು ಮದ್ರಸಕ್ಕೆ ಸೇರಿಸಿ ಹಿಂತಿರುಗುತ್ತಿದ್ದ ಚೆಂಬರಿಕದ ಮುಹ ಮ್ಮದ್ ಕುಂಞಿ ಅದೃಷ್ಟದಿಂದ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಕಾಲಿಗೆ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

You cannot copy contents of this page