ಚೆಮ್ನಾಡ್ ಪಂಚಾಯತ್ ಕಚೇರಿಯಲ್ಲಿ ಕಳವಿಗೆತ್ನ

ಕಾಸರಗೋಡು: ಕೋಳಿಯಡ್ಕದ ಲ್ಲಿರುವ ಚೆಮ್ನಾಡ್ ಪಂಚಾಯತ್ ಕಚೇರಿಯ ಬಾಗಿಲು ಮುರಿದು ಒಳನು ಗ್ಗಿದ ಕಳ್ಳರು ಅಲ್ಲಿ ಕಳವಿಗೆ ಯತ್ನಿಸಿ ದ್ದಾರೆ. ಕಚೇರಿಯೊಳಗೆ ನುಗ್ಗಿದ ಕಳ್ಳರು ಅದರೊಳಗಿದ್ದ ಹಣ ಹಾಗೂ ಮಹತ್ತರ ದಾಖಲುಪತ್ರಗಳು ಒಳಗೊಂಡಿದ್ದ ಲಾಕ ರನ್ನು ಒಡೆಯುವ ಯತ್ನ ನಡೆಸಿದ್ದಾರೆ. ಫ್ರೆಂಟ್ ಕಚೇರಿ ಕಾರ್ಯದರ್ಶಿಯವರ ಕೊಠಡಿಗೂ ಕಳ್ಳರು ನುಗ್ಗಿದ್ದಾರೆ.  ಕ್ಲರ್ಕ್‌ಗಳು ಕುಳಿತುಕೊಳ್ಳುವ ಕೊಠಡಿಯಲ್ಲಿ ಇರಿಸಲಾಗಿದ್ದ ಲಾಕರ್ ಅದೇ ಕಚೇರಿಯ ವಿಇಒ ಕುಳಿತುಕೊಳ್ಳುವ ಕೊಠಡಿಯೊಳಗೆ ಪತ್ತೆಯಾಗಿದೆ. ಈ ಲಾಕರ್ ಸುಮಾರು ಒಂದು ಕ್ವಿಂಟಾಲ್‌ಗಿಂತಲೂ ಹೆಚ್ಚು ತೂಕವಿದ್ದು ಅದರಿಂದಾಗಿ ಕಳ್ಳರಿಗೆ ಅಧನ್ನು ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಪ್ರಸ್ತುತ ಕಚೇರಿಯ ಅಸಿಸ್ಟೆಂಟ್ ಕಾರ್ಯದರ್ಶಿ  ಎಸ್. ಬಿನು ಕುಮಾರ್ ನೀಡಿದ ದೂರಿ ನಂತೆ ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ.  ಬೆರಳಚ್ಚು ತಜ್ಞರೂ ಆಗಮಿಸಿ ಪ್ರಸ್ತುತ ಕಚೇರಿಯಿಂದ ಹಲವಾರು ಬೆರ ಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ತನಿಖೆಗಾಗಿ ಶ್ವಾನದಳವನ್ನು ಬಳಸಲಾಯಿತು. ಕಳ್ಳರ ಪತ್ತೆಗಾಗಿ  ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು  ಪೊಲೀಸರು ಪರಿ ಶೀಲಿಸತೊಡಗಿದ್ದಾರೆ.

You cannot copy contents of this page