ಚೆರ್ಕಳಂ ಅಬ್ದುಲ್ಲ ಸಂಸ್ಮರಣೆ ನಾಳೆ
ಕಾಸರಗೋಡು: ಮುಸ್ಲಿಂ ಲೀಗ್‌ನ ಹಿರಿಯ ಮುಖಂಡ ನಾಗಿದ್ದ ಹಾಗೂ ಐಕ್ಯರಂಗದ ಜಿಲ್ಲಾ ಅಧ್ಯಕ್ಷನಾಗಿದ್ದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲರ ೭ನೇ ವಾರ್ಷಿಕ ಸಂಸ್ಮರಣೆ ನಾಳೆ ಅಪರಾಹ್ನ ೨ ಗಂಟೆಗೆ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಚೇರಿ ಟಿ.ಎ. ಇಬ್ರಾಹಿಂ ಸ್ಮಾರಕ ಮಂದಿರದಲ್ಲಿ ನಡೆಯಲಿದೆ. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು, ವಿಧಾನಸಭಾ ಮಂಡಲ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮೊದಲಾದವರು ಭಾಗವಹಿಸುವರೆಂದು ಕಲ್ಲಟ್ರ ಮಾಹಿನ್ ಹಾಜಿ, ಎ. ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.