ಚೇಲಕ್ಕರದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 19.5 ಲಕ್ಷ ರೂ. ವಶ

ತೃಶೂರು: ಚೇಲಕ್ಕರ ವಿಧಾನಸಭಾ ಮಂಡಲದ  ಉಪ ಚುನಾವಣೆಯ ಮತದಾನಕ್ಕೆ ಗಂಟೆಗಳು ಮಾತ್ರ ಬಾಕಿ ಇರುವಾಗ ಕಾರಿನಲ್ಲಿ ಸಾಗಿಸುತ್ತಿದ್ದ 19.5 ಲಕ್ಷ ರೂ. ವಶಪಡಿಸಲಾಗಿದೆ. ಇಂದು ಮುಂಜಾನೆ ವಳ್ಳತ್ತೋಳ್ ನಗರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಮಧ್ಯೆ ಕಾರಿನ ಢಿಕ್ಕಿಯಲ್ಲಿ ಇರಿಸಿ ಹಣವನ್ನು ಸಾಗಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಬ್ಯಾಂಕ್‌ನಿಂದ ನಗದೀಕರಿಸಿದ ಹಣ ಇದು ಎಂದು ಕಾರಿನಲ್ಲಿದ್ದ ಜಯನ್ ಎಂಬಾತ ಪೊಲೀಸರಲ್ಲಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಬ್ಯಾಂಕ್‌ನಿಂದ ಹಣ ಹಿಂತೆಗೆದ ದಾಖಲೆಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಪೊಲೀಸರ ವಶದ ಲ್ಲಿರುವ ಜಯ ಎಂಬಾತ ಯಾವುದಾ ದರೂ ರಾಜಕೀಯ ಪಕ್ಷದೊಂದಿಗೆ ಸಂಪರ್ಕವಿರುವ ವ್ಯಕ್ತಿಯೇ ಎಂಬ ಬಗ್ಗೆಯೂ ಸ್ಪಷ್ಟವಾಗಿಲ್ಲ.

RELATED NEWS

You cannot copy contents of this page