ಚೇವಾರು ಶಾಲಾ ಪ್ರವೇಶೋತ್ಸವ

ಪೈವಳಿಕೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ಪ್ರವೇಶೋತ್ಸವವನ್ನು ವಾರ್ಡ್ ಪ್ರತಿನಿದಿs ರಾಜೀವಿ ಶೆಟ್ಟಿಗಾರ್ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಅಸೀಸ್ ಚೇವಾರ್ ಹಾಗೂ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕೆÀ್ಷ ತಾಹಿರಾ ಬಾನು ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಂ ಭಟ್ ಪ್ರಾಸ್ತಾವಿಕ ನುಡಿದರು.ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಾಠ ಪುಸ್ತಕಗಳನ್ನು ವಿತರಿಸಲಾಯಿತು.ರವಿಕುಮಾರ್ ಸ್ವಾಗತಿಸಿ, ಹ್ಯಾರಿಸ್ ವಂದಿಸಿದರು. ಶಿಕ್ಷಕರಾದ ಪ್ರಸಾದ್ ರೈ ನಿರೂಪಿಸಿ ದರು. ಶಿಕ್ಷಕಿಯರಾದ ರಾಜೇಶ್ವರಿ.ಬಿ, ಪ್ರಮೀಳಾ ಡಿ.ಎನ್,ಪ್ರೀಮಾ ಕ್ರಾಸ್ತಾ, ಕವಿತಾ, ವಿನೀತ, ಶಿಕ್ಷಕರಾದ ಸಾತ್ವಿಕ್, ರತೀಶ್, ಅನೀಸ್ ಮತ್ತು ಗೋಪಾಲಕೃಷ್ಣ ಭಟ್ ಸಹಕರಿಸಿದರು.

RELATED NEWS

You cannot copy contents of this page