ಜನತೆಗೆ ಮತ್ತೆ ವಿದ್ಯುತ್ ಶಾಕ್
ತಿರುವನಂತಪುರ: ಪೂರ್ವನಿರೀಕ್ಷೆಯಂತೆ ರಾಜ್ಯದಲ್ಲಿ ವಿದ್ಯುತ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ. ಇದರಂತೆ ಯೂನಿಟ್ಗೆ ಸರಾಸರಿ 19 ಪೈಸೆಯಂತೆ ಹೆಚ್ಚಿಸಲಾಗಿದೆ. ಈ ಏರಿಕೆಯನ್ನು ಡಿಸೆಂಬರ್ 5ರಿಂದಲೇ ಅನ್ವಯಗೊಳಿಸಿ ಜ್ಯಾರಿಗೊಳಿಸಲಾಗಿದೆ.
ಈ ಏರಿಕೆ ಇಲ್ಲಿಗೆ ಮುಗಿದಿಲ್ಲ. ಮುಂದಿನವರ್ಷ ಎಪ್ರಿಲ್ನಿಂದ ಪ್ರತೀ ಯೂನಿಟ್ ಬೆಲೆಯಲ್ಲಿ ತಲಾ 12 ಪೈಸೆಯಂತೆ ಹೆಚ್ಚಿಸುವ ತೀರ್ಮಾನವನ್ನೂ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಕೈಗೊಂಡಿದೆ. ಕೃಷಿಗೆ ಬಳಸುವ ವಿದ್ಯುತ್ ದರವನ್ನೂ ಯೂನಿಟ್ಗೆ ತಲಾ 5 ಪೈಸೆಯಂತೆ ಹೆಚ್ಚಿಸಲಾಗಿದೆ.
ಇದೇ ವೇಳೆ 40 ಯೂನಿಟ್ ತನಕ ಬಳಸುವವರು, ಅನಾಥಾಲಯಗಳು, ವೃದ್ಧ ಸದನಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಕ್ಯಾನ್ಸರ್ ರೋಗ ಅಥವಾ ವಿಕಲಚೇತನವಿದ್ದಲ್ಲಿ ಅಂತಹ ಬಳಕೆದಾರರ ವಿದ್ಯುತ್ ದರ ಏರಿಸದಿರುವ ತೀರ್ಮಾನವನ್ನೂ ಆಯೋಗ ಕೈಗೊಂಡಿದೆ.
ಇದರAತೆ ತಿಂಗಳಿಗೆ 50 ಯೂನಿಟ್ ತನಕ ವಿದ್ಯುತ್ ಬಳಸುವವರಿಗೆ ಯೂನಿಟ್ವೊಂದರ ದರ ಈಗಿನ 3.25 ರೂ.ನಿಂದ 3.30 ರೂ.ಗೆ ಏರಲಿದೆ. 51ರಿಂದ 100 ಯೂನಿಟ್ ತನಕ 4.05 ರೂ.ನಿಂದ 4.15 ರೂ., 100ರಿಂದ 150 ಯೂನಿಟ್ ತನಕ 5.10ರೂ.ನಿಂದ 5.25 ರೂ., 151ರಿಂದ 200 ಯೂನಿಟ್ ತನಕ 6.95 ರೂ.ನಿಂದ 7.10 ರೂ., 201 ಯೂನಿಟ್ ನಿಂದ 250 ಯೂನಿಟ್ ತನಕ 8.20 ರೂ.ನಿಂದ 8.35 ರೂ., 250ರಿಂದ 300 ಯೂನಿಟ್ ತನಕ 8.40 ರೂ.ನಿಂದ 8.55 ರೂ.ಗೇರಿಸಲಾಗಿದೆ.
35 ಯೂನಿಟ್ ತನಕ 7.25 ರೂ.ನಿಂದ 7.40 ರೂ., 400 ಯೂನಿಟ್ ತನಕ 7.60 ರೂ.ನಿಂದ 7.70 ರೂ., 500 ಯೂನಿಟ್ ತನಕ 7.90ರಿಂದ 8.05ತನಕ ಹೆಚ್ಚಿಸಲಾಗಿದೆ. 500 ಯೂನಿಟ್ ಬಳಿಕ ಪ್ರತೀ ಯೂನಿಟ್ ದರವನ್ನು 8.80 ರೂ.ನಿಂದ 9 ರೂ.ಗೇರಿಸಲಾಗಿದೆ.