ಜನವಾಸ ಕೇಂದ್ರಗಳಲ್ಲಿ ಉಪಟಳ ನೀಡುವ ವನ್ಯ ಜೀವಿಗಳ ಬೇಟೆಗೆ ಕಾನೂನು ನಿರ್ಮಾಣಕ್ಕೆ ಚಿಂತನೆ

ತಿರುವನಂತಪುರ: ಅರಣ್ಯ ಗಳಿಂದ ಜನವಾಸ ಕೇಂದ್ರಕ್ಕೆ ಬಂದು ಉಪಟಳ ನೀಡುತ್ತಿರುವ ವನ್ಯ ಜೀವಿಗಳನ್ನು ಬೇಟೆಯಾಡಲು ಹೊಸ ಕಾನೂನಿಗೆ ರೂಪು ನೀಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕೇಂದ್ರ ಸರಕಾರ ಸಂಬಂಧಪಟ್ಟ ಕಾನೂ ನನ್ನು ಸೂಕ್ತ ತಿದ್ದುಪಡಿ ತರಬೇಕೆಂಬ ಬೇಡಿಕೆಯ್ನು  ಕೇರಳ  ಕೇಂದ್ರ ದೊಡನೆ ಈಗಾಗಲೇ ಆಗ್ರಹ ಪಟ್ಟಿದೆ. ಇದರಂತೆ  ಜನವಾಸ ಕೇಂದ್ರಗಳಿಗೆ ನುಗ್ಗುವ ವನ್ಯ ಜೀವಿಗಳನ್ನು ಗುಂಡಿಕ್ಕಿ ಕೊಲ್ಲಲು ಈ ಕಾನೂನು ಸಹಾಯಕವಾ ಗಲಿದೆ. ಈ ಕುರಿತಾದ ಕಾನೂನಿಗೆ ರೂಪು ನೀಡಲು ರಾಜ್ಯ ಅರಣ್ಯ-ಕಾನೂನು ಇಲಾಖೆ ಯ ಅಡ್ವಕೇಟ್ ಜನರಲ್‌ರ ಕಾನೂನು ಉಪದೇಶವನ್ನು ಸರಕಾರ ಕೇಳಿದೆ.

You cannot copy contents of this page