ಜನ್ಮನಕ್ಷತ್ರದಂದು ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದ ಎಡನೀರುಶ್ರೀ
ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಜನ್ಮ ನಕ್ಷತ್ರದ ಪ್ರಯುಕ್ತ ರವಿವಾರದಂದು ಶ್ರೀಗಳು ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದರು. ಸೇವಾಶ್ರಮದ ಡಾ| ಉದಯಕುಮಾರ್ ದಂಪತಿಗಳು ಶ್ರೀಗಳನ್ನು ಬರಮಾಡಿಕೊಂಡು ಧೂಳಿಪೂಜೆ ನೆರವೇರಿಸಿದರು. ಆಶ್ರಮದ ಕಾರ್ಯವೈಖರಿಯನ್ನು ವೀಕ್ಷಿಸಿದ ಶ್ರೀಗಳು ಆಶ್ರಮವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.