ಜಮ್ಮು- ಕಾಶ್ಮೀರದಲ್ಲಿ ಭೂಕಂಪ

ಶ್ರೀನಗರ: ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದಲ್ಲಿ ಎರಡು ಬಾರಿ ಭೂಕಂಪದ ಅನುಭವವಾಗಿದೆ. ಇಂದು ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 4.9 ಹಾಗೂ 4.8 ತೀವ್ರತೆಯ ಭೂಕಂಪ ಜಮ್ಮು-ಕಾಶ್ಮೀರದ ಬಾರಾಮುಲ್ಲದಲ್ಲಿ ಉಂಟಾಗಿದೆ. ಭೂಕಂಪ ಉಂಟಾದಾಗ ಜನರು ಮನೆಯಿಂದ ಹೊರ ಓಡಿದ್ದಾರೆ. ಜನರಲ್ಲಿ ಆತಂಕದ ವಾತಾವರಣವೂ ನಿರ್ಮಾಣವಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ ಐದು ಕಿ.ಮಿ. ಆಳದಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

You cannot copy contents of this page