ಜಾತಿ ಸೆನ್ಸಸ್ ಜ್ಯಾರಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನ ಸ್ವಾಗತಾರ್ಹ-ಎಸ್‌ಎನ್‌ಡಿಪಿ

ಹೊಸಂಗಡಿ: ಜಾತಿ ಸೆನ್ಸಸ್ ಜಾರಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನವನ್ನು ಎಸ್‌ಎನ್‌ಡಿಪಿ  ಯೋಗಂ ಮಂಜೇಶ್ವರ ಶಾಖಾ ವಾರ್ಷಿಕ ಸಭೆಯಲ್ಲಿ ಸ್ವಾಗತಿಸಲಾ ಯಿತು. ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾರಾಯಣನ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.  ಕಾಶ್ಮೀರದಲ್ಲಿ ವೀರಮೃತ್ಯು ಪಡೆದ ಸೈನಿಕರು ಹಾಗೂ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಆಕ್ರಮಣದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ  ಅರ್ಪಿಸ ಲಾಯಿತು. ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಾರ್ಯ ದರ್ಶಿ ಗಣೇಶ್ ಪಾರಕಟ್ಟೆ ಉದ್ಘಾಟಿಸಿದರು. ತೀಯಾ ಸಮುದಾಯವು ಪಕ್ಷಾತೀತ ವಾಗಿ ಒಗ್ಗಟ್ಟಾಗಿ ನಿಂತು ಸಮುದಾಯದ ಹಕ್ಕುಗಳನ್ನು ಪಡೆಯಲು ಸಂಘಟಿತ ಶಕ್ತಿಯಾಗಿ ಬದಲಾಗಬೇಕೆಂದು  ಅವರು ಹೇಳಿದರು. ಯೂನಿಯನ್ ಉಪಾಧ್ಯಕ್ಷ ಎ.ಟಿ. ವಿಜಯನ್ ಮುಖ್ಯ ಭಾಷಣಗೈದರು.  ಯೂನಿಯನ್ ಪಂಚಾಯತ್ ಸಮಿತಿ ಸದಸ್ಯ ಮೋಹನನ್ ಮೀಪುಗುರಿ, ವನಿತಾ ಸಂಘ ಯೂನಿಯನ್ ಅಧ್ಯಕ್ಷೆ ಸುನಿತಾ ದಾಮೋದರನ್ ಪಾಲ್ಗೊಂಡಿದ್ದರು.

You cannot copy contents of this page