ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಡಿ. ಶಿಲ್ಪಾ ಮತ್ತೆ ನೇಮಕ

ಕಾಸರಗೋಡು: ಕಾಸರಗೋಡು ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಕನ್ನಡತಿ ಡಿ. ಶಿಲ್ಪಾರನ್ನು  ಮತ್ತೆ ನೇಮಿಸಲಾಗಿದೆ. ಇವರು ಈ ಹಿಂದೆ ಕಾಸರಗೋಡು ಎಎಸ್‌ಪಿಯಾ ಗಿಯೂ, ಅನಂತರ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದು, ಅದರಿಂದಾಗಿ ಅವರು ಜಿಲ್ಲೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಪೊಲೀಸ್ ಅಧಿಕಾರಿಯೂ  ಆಗಿದ್ದಾರೆ. ಇವರು ಈಗ ರಾಜ್ಯ ಪೊಲೀಸ್ ಅಕಾಡೆಮಿಯ ಹೆಡ್ ಕ್ವಾರ್ಟರ್ಸ್‌ನಲ್ಲಿ ಪ್ರೊಕ್ಯೂರ್‌ಮೆಂಟ್ (ಸ್ವಾಮತ್ತೆ) ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿಂದ ಅವರನ್ನು ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ  ವರ್ಗಾಯಿಸಿ ಮರು ನೇಮಿಸಲಾಗಿದೆ. ಇವರು 2020ರಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ  ಉತ್ತಮ ರೀತಿಯ ಸೇವೆ ಸಲ್ಲಿಸಿದ್ದರು.

ಈಗಿನ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿನೊರನ್ನು ಇಲ್ಲಿಂದ ತಿರುವನಂತಪುರ ದಲ್ಲಿರುವ ರಾಜ್ಯ ಪೊಲೀಸ್ ಟ್ರೈನಿಂಗ್ (ತರಬೇತಿ) ಕಾಲೇಜಿನ ಪ್ರಾಂಶುಪಾಲರನ್ನಾಗಿ ವರ್ಗಾಯಿಸಿ ನೇಮಿಸಲಾಗಿದೆ. ಇವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಅಲ್ಪ ಸಮಯದಲ್ಲೇ ಕಾನೂನು ಮತ್ತು ಶಿಸ್ತುಪಾಲನೆ ಹಾಗೂ ತನಿಖಾ ರಂಗದಲ್ಲೂ ಮಿಂಚಿದ್ದಾರೆ. ಇವರು ವರಿಷ್ಠ ಜಿಲ್ಲಾ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ಜಿಲ್ಲೆಯಲ್ಲಿ ಯಾವುದೇ ರೀತಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ತಲೆಯೆತ್ತಲಿಲ್ಲ.

RELATED NEWS

You cannot copy contents of this page