ಜಿಲ್ಲೆಯಲ್ಲಿ ೨೫ ಮತಗಟ್ಟೆಗಳ ಸ್ಥಳಾಂತರ; ೧೪೭ರ ಹೆಸರು ಬದಲಾವಣೆ

ಕಾಸರಗೋಡು: ಲೋಕಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವಂತೆಯೇ ಜಿಲ್ಲೆಯಲ್ಲಿ ೨೫ ಮತಗಟ್ಟೆ (ಪೋಲಿಂಗ್ ಸ್ಟೇಷನ್)ಗಳನ್ನು ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರಿಸಲಾಗುವುದು.

ಮಾತ್ರವಲ್ಲ ೮೨ ಮತಗಟ್ಟೆಗಳನ್ನು ಬೇರೆ ಕಟ್ಟಡಗಳಿಗೆ ಬದಲಾಯಿಸಲಾಗುವುದು. ಇದರ ಹೊರತಾಗಿ ೧೪೭ ಮತಗಟ್ಟೆಗಳ ಹೆಸರುಗಳನ್ನು ಬದಲಾಯಿಸಲಾಗುವುದು.

ಹೀಗೆ ಮತಗಟ್ಟೆಗಳ ಸ್ಥಳಾಂತರ, ಹೆಸರು ಬದಲಾವಣೆಗೆ ಸಂಬಂಧಿಸಿ ಚುನಾವಣಾ ಅಧಿಕಾರಿಗಳಾದ  ತಹಶೀಲ್ದಾರರು ತಯಾರಿಸಿದ ವರದಿಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರನ್‌ರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆ ಅಂಗೀಕರಿಸಿದೆ.

ಇದರಂತೆ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಎಲ್ಲಾ ಮತಗಟ್ಟೆಗಳ ಹೆಸರು ಬದಲಾವಣೆಗೊಳ್ಳಲಿದೆ.  ಕಾಸರಗೋಡು ವಿಧಾನಸಭಾ ಕ್ಷೇತ್ರದ ೫೪, ಮಂಜೇಶ್ವರ ೨೦, ಹೊಸದುರ್ಗ ೧೨, ಉದುಮ ೫೩ ಮತ್ತು ತೃರಿಪುರ ವಿಧಾನಸಭಾ ಕ್ಷೇತ್ರದ ೮ ಮತಗಟ್ಟೆಗಳ ಹೆಸರು ಬದಲಾಯಿಸಲಾಗುವುದು.

ಮಾತ್ರವಲ್ಲ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಗಳು ಸ್ಥಳಾಂತರಗೊಳ್ಳಲಿದೆ. ೧೧ ಮತಗಟ್ಟೆಗಳು ಬೇರೆ ಕಟ್ಟಡಗಳಿಗೆ  ಬದಲಾವಣೆಗೊಳ್ಳಲಿದೆ.  ಉದುಮದಲ್ಲಿ ೫ ಮತಗಟ್ಟೆಗಳು ಸ್ಥಫಾಂತರಗೊಂಡರೆ, ೧೧ ಬೇರೆ ಕಟ್ಟಡಕ್ಕೆ ಬದಲಾಯಿಸಲಾಗುವುದು. ಹೊಸದುರ್ಗದಲ್ಲಿ ೪ ಮತಗಟ್ಟೆಗಳು ಸ್ಥಳಾಂತರಗೊಂಡರೆ ೨೪ ಮತಗಟ್ಟೆಗಳು ಬೇರೆ ಕಟ್ಟಡದಲ್ಲಿ ಇನ್ನು ಕಾರ್ಯವೆಸಗಲಿದೆ. ತೃಕ್ಕರಿಪುರದಲ್ಲಿ ೭ ಮತಗಟ್ಟೆಗಳು ಸ್ಥಳಾಂತರಗೊಂಡರೆ ೧೫ ಮತಗಟ್ಟೆಗಳು ಇನ್ನು ಬೇರೆ ಕಟ್ಟಡದಲ್ಲಿ ಕಾರ್ಯವೆಸಗಲಿದೆ. 

Leave a Reply

Your email address will not be published. Required fields are marked *

You cannot copy content of this page