ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮಂಗಲ್ಪಾಡಿ: ಪ್ರತಾಪನಗರ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಗೌರವಾಧ್ಯಕ್ಷ ಧನ್‌ರಾಜ್ ಬೀಟಿಗದ್ದೆ ಉಪಸ್ಥಿತರಿದ್ದರು. ಕ್ಲಬ್‌ನ ಲೆಕ್ಕಪತ್ರವನ್ನು ಮಂಡಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುರೇಶ್ ಜಿ., ಉಪಾಧ್ಯಕ್ಷರಾಗಿ ಕೆ.ಪಿ. ಅವಿ ನಾಶ್, ಕಾರ್ಯ ದರ್ಶಿಯಾಗಿ ಚೇತನ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜಗನ್ನಾಥ ರೈ, ಕ್ರೀಡಾ ಕಾರ್ಯ ದರ್ಶಿಗಳಾಗಿ ದಿನೇಶ್ ಬೀಟಿಗದ್ದೆ, ಬ್ರಿಜೇಶ್ ಬೀಟಿಗದ್ದೆ, ಕೋಶಾಧಿಕಾರಿ ಯಾಗಿ ಯತೀಶ್ ಪೂಜಾರಿ ಬೀಟಿಗದ್ದೆ, ಲೆಕ್ಕ ಪರಿಶೋಧಕರಾಗಿ ಅವಿನಾಶ್ ಎಂ., ಹಾಗೂ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಬಿ.ಕೆ. ಶೆಟ್ಟಿ, ಸಂತೋಷ್ ಪೂಜಾರಿ, ನವೀನ್ ಶೆಟ್ಟಿ, ಸುಧೀರ್, ಅರುಣ್, ಅನಿಲ್ ಪೂಜಾರಿ ಆಯ್ಕೆಯಾದರು. ಧನ್‌ರಾಜ್ ಸ್ವಾಗ ತಿಸಿ, ಅವಿನಾಶ್ ಎಂ. ವಂದಿಸಿದರು.

You cannot copy contents of this page