ಜೈಲಿನಿಂದ ಎರಡು ದಿನದ ಹಿಂದೆ ಬಿಡುಗಡೆಗೊಂಡ ಕೊಲೆ ಪ್ರಕರಣದ ಆರೋಪಿಯನ್ನು ತಾಯಿ ಕಣ್ಮುಂದೆ ಕಡಿದು ಕೊಲೆ

ತಲಪಾಡಿ: ಹೋಟೆಲ್‌ನಿಂದ  ಆಹಾರ ಸೇವಿಸಲು ತಲುಪಿದ ಯುವಕನನ್ನು ತಾಯಿಯ ಕಣ್ಣ ಮುಂದೆಯೇ ಕಡಿದು ಕೊಲೆಗೈಯ್ಯಲಾಗಿದೆ. ಉಳ್ಳಾಲ ಕಡಪ್ಪುರ ನಿವಾಸಿ ಶಮೀರ್ (35) ಕೊಲೆಗೀಡಾದ ಯುವಕ. ನಿನ್ನೆ ರಾತ್ರಿ ಉಳ್ಳಾಲ ಕಲ್ಲಾಪುನಲ್ಲಿ ಘಟನೆ ಸಂಭವಿಸಿದೆ. ಕೊಲೆ ಪ್ರಕರಣ ಸಹಿತ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಶಮೀರ್. ಎರಡು ದಿನದ ಹಿಂದೆ ಈತ ಜೈಲಿನಿಂದ ಬಿಡುಗಡೆಗೊಂಡಿದ್ದನು. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ತಾಯಿಯ ಜೊತೆ ಹೋಟೆಲ್‌ಗೆ ಆಹಾರ ಸೇವಿಸಲು ಶಮೀರ್ ತಲುಪಿದ್ದು, ಆಹಾರ ಸೇವಿಸಿದ ಬಳಿಕ ಮನೆಗೆ ಹಿಂತಿರುಗುವ ವೇಳೆ ಒಂದು ತಂಡ ಆಕ್ರಮಣ ನಡೆಸಿದೆ. ಗಾಯ ಗೊಂಡ ಶಮೀರ್ ಓಡಿ ಪರಾರಿ ಯಾಗಲು ಯತ್ನಿಸಿದ್ದು, ಬೆನ್ನಟ್ಟಿದ ತಂಡ ಕಡಿದು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಲ್ಲಾಪು ಬಳಿ ಮೃತದೇಹ ಪತ್ತೆ ಯಾಗಿದೆ. ಕೊಲೆಗೈದವರ ತಂಡದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ದ್ದಾರೆ.  ೨೦೧೮ರಲ್ಲಿ ಮಂಗಳೂರು ಜೆಪ್ಪುವಿನ ಫ್ಲ್ಯಾಟ್‌ನಲ್ಲಿ ಟಾರ್ಗೆಟ್ ಇಲ್ಯಾಸ್ ಎಂಬಾತನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ದ್ವಿತೀಯ ಆರೋಪಿಯಾಗಿದ್ದಾನೆ ಶಮೀರ್ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page