ಜ್ಯೂಸ್ ಎಂದು ತಿಳಿದು ಸೀಮೆಎಣ್ಣೆ ಕುಡಿದ ಮಗು ಮೃತ್ಯು
ತಿರುವನಂತಪುರ: ಹಣ್ಣಿನ ರಸವೆಂದು ತಿಳಿದು ಸೀಮೆ ಎಣ್ಣೆಯನ್ನು ಕುಡಿದ ಎರಡು ವರ್ಷದ ಮಗು ಚಿಕಿತ್ಸೆ ಮಧ್ಯೆ ಮೃತಪಟ್ಟಿದೆ. ಕನ್ಯಾಕುಮಾರಿ ಜಿಲ್ಲೆಯ ಪನಚ್ಚಮೂಡಿನ್ ಸಮೀಪ ದೇವಿಕೂಡ್ ನಿವಾಸಿಗಳಾದ ಅನಿಲ್- ಅರುಣ ದಂಪತಿಯ ಪುತ್ರನಾದ ಆರೋನ್ ಮೃತಪಟ್ಟ ಮಗು. ಗುರುವಾರ ಸಂಜೆ ಸಹೋದರಿಯ ಜೊತೆ ಆಟವಾಡುತ್ತಿದ್ದ ಮಧ್ಯೆ ಜ್ಯೂಸ್ ಬಾಟಲಿಯಲ್ಲಿ ತೆಗೆದಿರಿಸಿದ್ದ ಸೀಮೆ ಎಣ್ಣೆಯನ್ನು ಮಗು ಕುಡಿದಿತ್ತು.