ಜ್ಯೋತಿಷಿಯ ಪತ್ನಿ ನಾಪತ್ತೆ
ಕಾಸರಗೋಡು: ಜ್ಯೋತಿಷಿ ಯೊಬ್ಬರ ಪತ್ನಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಡಂಕುಳಿ ಶ್ರೀ ನಿಲಯದ ಟಿ.ಕೆ. ರತ್ನಾಕರನ್ ಎಂಬವರ ಪತ್ನಿ ಶ್ರೀಕಲ (42) ನಾಪತ್ತೆಯಾಗಿರುವುದಾಗಿ ಬೇಡಗಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10.45 ರ ಮಧ್ಯೆ ಶ್ರೀಕಲ ನಾಪತ್ತೆಯಾಗಿರುವುದಾಗಿ ರತ್ನಾಕರನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ‘ನಾನು ಹೋಗುತ್ತೇನೆ’ ಎಂದು ಪತ್ರ ಬದೆದಿಟ್ಟು ಶ್ರೀಕಲ ಮನೆಯಿಂದ ತೆರಳಿದ್ದಾರೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಶ್ರೀಕಲ ಕಣ್ಣೂರು ಜಿಲ್ಲೆಯಲ್ಲಿರುವುದಾಗಿ ಮಾಹಿತಿ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.