ಟಿಪ್ಪಣಿ ಬರೆದಿಟ್ಟು ನಿವೃತ್ತ ಮುಖ್ಯೋಪಾಧ್ಯಾಯ ನಿಧನ
ಪೊಯಿನಾಚಿ: ಸಾವಿಗೂ ಮೊದಲು ತನ್ನ ಬಗ್ಗೆ ಟಿಪ್ಪಣಿ ಬರೆದಿಟ್ಟು ನಿವೃತ್ತ ಮುಖ್ಯೋ ಪಾಧ್ಯಾಯ ನಿಧನಹೊಂದಿದರು. ಮೇಲ್ಬಾರದ ಕಾಮಲೇನ್ ವಲಿಯವೀಟಿಲ್ ಮುತ್ತು ನಾಯರ್ (೮೬) ನಿಧನ ಹೊಂದಿದವರು. ಇಂದು ಇವರು ತಾನು ಶಾಲೆಗಾಗಿ ಮಾಡಿದ ಸಾಧನೆ ಮತ್ತು ತಮ್ಮ ಕುಟುಂಬದ ಬಗ್ಗೆ ಮಾಹಿತಿ ಬರೆದಿಟ್ಟು ನಿಧನಹೊಂದಿದ್ದಾರೆ.
ತಾನು ಮುಖ್ಯೋಪಾಧ್ಯಾಯ ನಾಗಿದ್ದು ಅರಮಂಗಾನ ಜಿಯುಪಿ ಶಾಲೆಯಲ್ಲಿ ಕುಡಿಯುವ ನೀರು ಇಲ್ಲವೆಂಬುದನ್ನು ತಿಳಿದು ನಿವೃತ್ತಿ ವೇಳೆ ಅಲ್ಲಿ ಕುಡಿಯುವ ನೀರು ವ್ಯವಸ್ಥೆ ಮಾಡಿದ್ದಾರೆ. ಇದು ತನ್ನ ಬದುಕಿನ ಸಾಧನೆಯೆಂದೂ ಅವರು ಬರೆದಿಟ್ಟಿದ್ದಾರೆ. ಮೃತರು ಪತ್ನಿ ಸರೋಜಿನಿ ಅಮ್ಮ, ಮಕ್ಕಳಾದ ಇ. ವಿಜಯ ಕುಮಾರ್, ಇ. ವಿಶ್ವನಾಥನ್, ಇ. ಮಣಿಕಂಠನ್, ಸೊಸೆಯಂದಿರಾದ ವಿ. ಸಾವಿತ್ರಿ, ಎನ್. ಶೀಬಾ, ಎಂ. ರಮ್ಯ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.