ಟಿಪ್ಪರ್ ಲಾರಿ ಢಿಕ್ಕಿ ಹೊಡೆಸಿ ಎಸ್‌ಐಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿ ಸೆರೆ
ಹೊಸದುರ್ಗ: ಹೊಯ್ಗೆ ಸಾಗಾಟ ತಡೆಯಲಿರುವ ಯತ್ನದ ಮಧ್ಯೆ ಎಸ್‌ಐಯನ್ನು ಟಿಪ್ಪರ್ ಲಾರ್ ಢಿಕ್ಕಿಹೊಡೆಸಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಪ್ರಧಾನ ಆರೋಪಿ ಸೆರೆಯಾ ಗಿದ್ದಾನೆ. ಕಾಞಂಗಾಡ್ ಕಲ್ಲೂರಾವಿ ಯ ಇರ್ಫಾನ್ (28)ನನ್ನು ಹೊಸುದುರ್ಗ ಇನ್‌ಸ್ಪೆಕ್ಟರ್ ಟಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಪ್ರಕರಣದ ದ್ವಿತೀಯ ಆರೋಪಿ ಪಡನ್ನಕ್ಕಾಡ್ ಕುರುಂದೂರಿನ ಅಬ್ದುಲ್ ಸಫ್ವಾ (29) ನನ್ನು ಈ ಮೊದಲೇ ಬಂಧಿಸಲಾಗಿದೆ.
2025 ಜನವರಿ 30ರಂದು ರಾತ್ರಿ ಘಟನೆ ನಡೆದಿದೆ. ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದಾರೆಂಬ ಮಾಹಿತಿ ತಿಳಿದು ಕಿಳಕ್ಕುಂಕರೆಗೆ ತಲುಪಿದಾಗ ಕೊಲೆಯತ್ನ ನಡೆಸಲಾಗಿದೆ. ಆಕ್ರಮಣದಿಂದ ಎಸ್‌ಐ ಜೊತೆ ಇದ್ದ ಸಿವಿಲ್ ಪೊಲೀಸ್ ಆಫೀಸರ್ ಅಶೋಕ್ ಗಾಯಗೊಂಡದ್ದರು. ಇವರ ದೂರಿನಂತೆ ಪೊಲೀಸರುಕೇಸು ದಾಖಲಿಸಿದ್ದಾರೆ.