ಟೊರೆಂಟೋ: ಲ್ಯಾಂಡ್ ಆಗಿ ರನ್ವೇಯಲ್ಲಿ ಸಾಗುವಾಗ ವಿಮಾನ ಮಗುಚಿ ಹೊತ್ತಿ ಉರಿದ ಘಟನೆ ಸಂಭವಿಸಿದೆ. ಕೆನಡದ ರಾಜಧಾನಿ ಟೊರೆಂಟೋದಲ್ಲಿ ಘಟನೆ ನಡೆದಿದೆ. ೮೦ ಜನರನ್ನು ಹೊತ್ತು ಆಗಮಿಸಿದ್ದ ಡೆಲ್ಟಾ ಏರ್ಲೈನ್ ವಿಮಾನ ರನ್ವೇಯಲ್ಲಿ ಮುಂದಕ್ಕೆ ಸಾಗುತ್ತಿರುವಾಗ ಅಪಘಾತ ಸಂಭವಿಸಿದ್ದು, ೧೮ ಮಂದಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಮಗು ಸೇರಿದಂತೆ ಓರ್ವ ವ್ಯಕ್ತಿ ಹಾಗೂ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಮಾನ ಅಮೆರಿಕಾದಿಂದ ಟೊರೆಂಟೋಕ್ಕೆ ತಲುಪಿತ್ತು.
