ಟ್ಯಾಂಕರ್ ಲಾರಿ ಅಪಘಾತ: ಸಂಚಾರಕ್ಕೆ ನಿಯಂತ್ರಣ
ಹೊಸದುರ್ಗ: ಕಾಞಂಗಾಡ್ ಸೌತ್‌ನಲ್ಲಿ ಟ್ಯಾಂಕರ್ ಲಾರಿ ಮಗುಚಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಈ ದಾರಿಯಲ್ಲಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. 18ಟನ್ ಭಾರದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಲಾರಿ ಮಗುಚಿ ಬಿದ್ದಿದ್ದು, ಇದನ್ನು ತೆರವುಗೊಳಿಸುವವರೆಗೆ ಈ ದಾರಿಯಾಗಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯ ಮೂಲಕ ವಾಹನಗಳಿಗೆ ಸಂಚರಿಸಲು ಅವಕಾಶವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಅಪರಾಹ್ನ ಮಂಗಳೂರಿನಿಂದ ಆಗಮಿಸಿದ ಟ್ಯಾಂಕರ್ ಲಾರಿ ಅಪಘಾತಕ್ಕೀಡಾಗಿತ್ತು. ಲಾರಿಯಲ್ಲಿ ಎಲ್‌ಪಿಜಿ ತುಂಬಿಕೊಂಡಿದ್ದ ಕಾರಣ ಭದ್ರತೆಯ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಂತೆ 18, 19, 26 ವಾರ್ಡ್‌ಗಳಲ್ಲಿ ರಜೆ ಘೋಷಿಸಲಾಗಿದೆ. ಶಾಲೆಗಳಿಗೂ ರಜೆ ಸಾರಲಾಗಿದೆ.