ಡಿ. 24, 25ರಂದು ದಾಖಲೆ ಮೊತ್ತದ ಮದ್ಯ ಮಾರಾಟ
ಕಾಸರಗೋಡು: ಕ್ರಿಸ್ಮಸ್ ಹಬ್ಬದಂದು ಹಾಗೂ ಅದರ ಹಿಂದಿನ ದಿನ ರಾಜ್ಯದ ಬಿವರೇಜಸ್ ಕಾರ್ಪರೇಶನ್ನ ಮದ್ಯದಂಗಡಿಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಒಟ್ಟು 152.06 ಕೋಟಿ ರೂಪಾಯಿಗಳ ಮದ್ಯ ಮಾರಾಟವಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವರ್ಷ ಈ ಎರಡು ದಿನಗಳಲ್ಲಿ 122.14 ಕೋಟಿ ರೂಪಾಯಿಗಳ ಮದ್ಯ ಮಾರಾಟವಾಗಿತ್ತು.
ಡಿ. 24ರಂದು 97.42 ಕೋಟಿ ರೂ.ಗಳ ಮದ್ಯ, 25ರಂದು 54.64 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. 24ರಂದು ಅತೀ ಹೆಚ್ಚು ಮದ್ಯ ಮಾರಾಟವಾದುದು ಚಾಲಕ್ಕುಡಿಯಲ್ಲಿರುವ ಮದ್ಯದಂಗಡಿಯಲ್ಲಾಗಿದೆ. ಅಲ್ಲಿ 78 ಲಕ್ಷ ರೂ.ಗಳ ಮದ್ಯ ಮಾರಾಟ ನಡೆದಿದೆ. ಚೆಂಗನಾಶೇರಿಯಲ್ಲಿ 66.88 ಲಕ್ಷ ರೂ.ಗಳ, ತಿರುವನಂತಪುರ ಪಳಯಾ ಎಚ್ಚಕ್ಕಡ ಎಂಬಲ್ಲಿ 64.15 ಲಕ್ಷ ರೂ.ಗಳ ಮದ್ಯ ಮಾರಾಟವಾಗಿದೆ.