ಪೈವಳಿಕೆ: ಡಿಎಡಬ್ಲ್ಯುಎಫ್ ಮಂಜೇಶ್ವರ ಏರಿಯಾ ಸಮಾವೇಶ ಮಂಜೇಶ್ವರದಲ್ಲಿ ಜರಗಿತು. ಮೊಯ್ದೀನ್ ಕುಟ್ಟಿ ಮಂಜೇಶರ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಉದ್ಘಾಟಿಸಿದರು. ಕಾರ್ಯದರ್ಶಿ ವರದಿ ಮಂಡಿಸಿದರು. ಜಿಲ್ಲಾ ಸಮಾವೇಶಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಏರಿಯಾ ಅಧ್ಯಕ್ಷರಾಗಿ ಮೊಯ್ದೀನ್ ಕುಟ್ಟಿ ಯವರನ್ನು ನೇಮಿಸಲಾಯಿತು. ಚಂದ್ರ ನಾಕ್ ಸ್ವಾಗತಿಸಿ, ಚಂದ್ರಾವತಿ ವಂದಿಸಿದರು.







