ಡಿಕೆಶಿಯ ಶತ್ರುಭೈರವಿ ಯಾಗ ಹೇಳಿಕೆ ಕರ್ನಾಟಕ ಇಂಟೆಲಿಜೆನ್ಸ್‌ನಿಂದ ತನಿಖೆ

ಕಣ್ಣೂರು: ಕರ್ನಾಟಕ ಕಾಂಗ್ರೆಸ್ ಸರಕಾರವನ್ನು ಬುಡಮೇಲುಗೊ ಳಿಸಲು ಕೇರಳದ  ಪ್ರಸಿದ್ಧ ಕ್ಷೇತ್ರವೊಂದರ ಪರಿಸರದ ರಹಸ್ಯ ಕೇಂದ್ರದಲ್ಲಿ ಶತ್ರುಭೈರವಿ ಯಾಗ, ಮೃಗಬಲಿ ನಡೆಸಲಾಗಿದೆಯೆಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ವಿವಾದವಾದ ಮಧ್ಯೆ ಕರ್ನಾಟಕ ಇಂಟೆಲಿಜೆನ್ಸ್ ವಿಭಾಗ ಕಣ್ಣೂರಿಗೆ ತಲುಪಿ ತನಿಖೆ ನಡೆಸಿದೆ. ಆದರೆ ಯಾಗ ನಡೆದಿದೆಯೆಂಬವುದಕ್ಕೆ ಸಾಕ್ಷ್ಯ ಸಂಗ್ರಹಿಸಲು ಅವರಿಗೆ ಸಾಧ್ಯವಾಗಿಲ್ಲವೆಂದು ತಿಳಿದುಬಂದಿದೆ. ಇದೇ ವೇಳೆ ಕೇರಳ ಪೊಲೀಸ್ ವಿಭಾಗ ಇಂಟೆಲಿಜೆನ್ಸ್  ಈ ರೀತಿಯ ಯಾಗ ಈ ಪರಿಸರದಲ್ಲಿ ನಡೆಸಲಾಗಿಲ್ಲವೆಂದು ತಿಳಿಸಿದೆ.

ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಯಂತೆ ಕಣ್ಣೂರಿನ ಪ್ರಸಿದ್ಧ  ಕ್ಷೇತ್ರದ ಹೆಸರನ್ನು ಉಲ್ಲೇಖಿಸಿ ವರದಿಯಾಗಿತ್ತು. ಆದರೆ ಆ ಕ್ಷೇತ್ರದ ಹೆಸರು ಹೇಳಿದ್ದು ಸ್ಥಳದ ಪರಿಚಯ ಸಿಗಲಾಗಿದೆಯೆದು ಆದರೆ  ಕ್ಷೇತ್ರದಿಂದ ೨೦ ಕಿಲೋ ಮೀಟರ್ ದೂರದ ರಹಸ್ಯ ಕೇಂದ್ರದಲ್ಲಿ ಯಾಗ ನಡೆಸಿರುವುದಾಗಿಯೂ ಡಿಕೆಶಿ ಮತ್ತೆ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕ್ಷೇತ್ರದ ಪದಾಧಿಕಾರಿಗಳು ಕ್ಷೇತ್ರಕ್ಕೆ ಸಂಬಂಧಿಸಿ ಈ ರೀತಿಯ ಪೂಜೆ ನಡೆಸಲಾಗುತ್ತಿಲ್ಲ. ಆದರೆ ತಳಿಪರಂಬ ಕ್ಷೇತ್ರದಲ್ಲಿ ಮೃಗಬಲಿ ನಡೆಸಲಾಗುತ್ತಿಲ್ಲ ವೆಂದು ತಿಳಿಸಿದಾರೆ. ಇದೇ ವೇಳೆ ಈ ವಿಷಯಕ್ಕೆ ಸಂಬಂಧಿಸಿ ಕೇರಳದ ದೇವಸ್ವಂ ಖಾತೆ ಸಚಿವ ಕೆ. ರಾಧಾಕೃಷ್ಣನ್ ಪ್ರತಿಕ್ರಿಯಿಸಿದ್ದು, ಡಿ.ಕೆ. ಶಿವಕುಮಾರ್ ಆರೋಪದಲ್ಲಿ ತಿಳಿಸಿರುವಂತಹ ಘಟನೆ ಕೇರಳದ ಎಲ್ಲಿಯೂ ನಡೆಯಲು ಸಾಧ್ಯತೆ ಯಿಲ್ಲ. ಈ ರೀತಿಯಲ್ಲಿ ಏನಾದರೂ ನಡೆದಿದೆಯೇ ಎಂದು ತನಿಖೆ ನಡೆಸುವುದಾಗಿ ಸಚಿವ ತಿಳಿಸಿದ್ದಾರೆ.

You cannot copy contents of this page