ಡ್ರೈವಿಂಗ್ ಲೈಸನ್ಸ್ ಡಿಜಿಟಲೀಕರಣಕ್ಕೆ ತೀರ್ಮಾನ
ಕಾಸರಗೋಡು: ಡ್ರೈವಿಂಗ್ ಲೈಸನ್ಸ್ ಡಿಜಿಟಲೀಕರಿಸಲು ರಾಜ್ಯ ಸಾರಿಗೆ ಇಲಾಖೆ ತೀರ್ಮಾನಿಸಿದೆ ಎಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಇದನ್ನು ತಿಳಿಸಿದ್ದಾರೆ.
ಡ್ರೈವಿಂಗ್ ಲೈಸನ್ಸ್ ಪರಿಶೀಲನೆ ಯನ್ನು ಕ್ಯೂ-ಆರ್ ಕೋಡ್ ಮೂಲಕ ನಡೆಸಲಾಗುವುದು. ರಾಜ್ಯ ದಲ್ಲಿ ಎ.ಸಿ. ಸೂಪರ್ ಫಾಸ್ಟ್ ಬಸ್ ಸೇವೆಗಳನ್ನೂ ಆರಂಭಿಸಲಾಗುವುದು. ಇದರ ಹೊರತಾಗಿ ಕೆಎಸ್‌ಆರ್‌ಟಿಸಿ ಆಶ್ರಯದಲ್ಲೂ ರಾಜ್ಯದಲ್ಲಿ ಡ್ರೈವಿಂಗ್ ಸ್ಕೂಲ್‌ಗಳನ್ನು ಆರಂಭಿಸಲಾಗು ವುದು. ಇದಕ್ಕಾಗಿ ಕೇರಳ ರೋಡ್ ಸೇಫ್ಟಿ ಅಥೋರಿಟಿ (ರಾಜ್ಯ ರಸ್ತೆ ಸು ರಕ್ಷಾ ಪ್ರಾಧಿಕಾರ) 30 ಲಕ್ಷ ರೂ. ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.