ತಂದೆ ನಿಧನ ಬಳಿಕ ನಾಪತ್ತೆಯಾದ ಪುತ್ರ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಪೆರ್ಲ: ಚಿಕಿತ್ಸೆಯಲ್ಲಿದ್ದ ತಂದೆ ಮೃತಪಟ್ಟಿರುವುದರಿಂದ ದುಃಖಿತ ನಾದ ಪುತ್ರ ನಾಪತ್ತೆಯಾಗಿದ್ದು, ಹುಡುಕಾಟ ವೇಳೆ ಆತನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪೆರ್ಲ ಅಡ್ಕ ಅಬ್ರಾಜೆ ಕೆದುಕ್ಕಾರ್ನ ಈಶ್ವರ ನಾಯ್ಕ್ (65) ನಿಧನಹೊಂದಿದ್ದು ಅದರ ಬೆನ್ನಲ್ಲೇ ನಾಪತ್ತೆಯಾದ ಪುತ್ರ ಯತೀಶ (35) ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಸೌಖ್ಯ ಪೀಡಿತನಾಗಿದ್ದ ಈಶ್ವರ ನಾಯ್ಕ ಆದಿತ್ಯವಾರ ರಾತ್ರಿ ನಿಧನಹೊಂದಿದ್ದರು. ವಿಷಯ ತಿಳಿದು ತಲುಪಿದ ಸಂಬಂಧಿಕರು ದುಃಖಿತರಾಗಿದ್ದ ಕುಟುಂಬಕ್ಕೆ ಸಾಂತ್ವನ ನುಡಿದಿದ್ದರು. ಸೋಮ ವಾರ ಈಶ್ವರ ನಾಯ್ಕರ ಅಂತ್ಯಸಂಸ್ಕಾರ ಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿದ್ದಂತೆ ಯತೀಶ ನಾಪತ್ತೆಯಾಗಿದ್ದರು. ಅದರಿಂದಾಗಿ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇದರಿಂದ ಇತರ ಮಕ್ಕಳು ಹಾಗೂ ಸಂಬಂಧಿಕರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಅನಂತರ ಯತೀಶ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಸಂಬಂಧಿಕರು ಶೋಧ ನಡೆಸಿದಾಗ ಯತೀಶರ ಮೊಬೈಲ್ ಫೋನ್ ಕೆದುಕ್ಕಾರ್ನಲ್ಲಿ ರಸ್ತೆ ಬದಿ ಪತ್ತೆಯಾಗಿತ್ತು. ಇದರಿಂದ ಅಲ್ಲೇ ಸಮೀಪದಲ್ಲಿರುವ ಬಾವಿಯನ್ನು ನೋಡಿದಾಗ ಅದರಲ್ಲಿ ಯತೀಶ ರ ಮೃತದೇಹ ಪತ್ತೆಯಾಗಿದೆ.
ಈಶ್ವರ ನಾಯ್ಕರ ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅನಂತರ ಅಸೌಖ್ಯಪೀಡಿತನಾಗಿದ್ದ ಈಶ್ವರ ನಾಯ್ಕರ ಶುಶ್ರೂಷೆಯಲ್ಲಿ ಯತೀಶ ತೊಡಗಿದ್ದರ. ಈ ಮಧ್ಯೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರೆನ್ನ ಲಾಗಿದೆ. ಇವರ ಓರ್ವ ಸಹೋ ದರ ಪುರುಷೋತ್ತಮ ಪೈಂಟಿಂಗ್ ಕಾರ್ಮಿಕನಾಗಿದ್ದಾರೆ. ಇವರಿಬ್ಬರೂ ಅವಿವಾಹಿತರಾಗಿದ್ದಾರೆ. ಇನ್ನೋ ರ್ವ ಸಹೋದರ ದೂರದಲ್ಲಿದ್ದಾರೆ. ಇಬ್ಬರು ಸಹೋದರಿ ಯರಿಗೆ ಮದುವೆಯಾಗಿದೆ.
ಎರಡು ವರ್ಷಗಳಿಂದ ಈಶ್ವರ ನಾಯ್ಕ, ಯತೀಶ ಹಾಗೂ ಪುರುಷೋತ್ತಮ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ತಂದೆಯ ಅಗಲುವಿಕೆಯಿಂದ ತೀವ್ರವಾಗಿ ಮನನೊಂದು ಯತೀಶ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ರಬಹುದೆಂದು ಸಂಶಯಿಸಲಾಗಿ ದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈಶ್ವರ ನಾಯ್ಕ ಹಾಗೂ ಪುತ್ರ ಯತೀಶರ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.