ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ನಾಲ್ವರ ದುರ್ಮರಣ; ಹಲವರಿಗೆ ಗಂಭೀರ

ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ದೇಶೀಯ ನಿರ್ಮಿತ ಸಿಡಿಮದ್ದು (ಪಟಾಕಿ) ತಯಾರಿ ವೇಳೆ ದಿಢೀರ್ ಸ್ಫೋಟ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೇವಲ ಒಂದೇ ತಿಂಗಳು ಬಾಕಿ ಇರುವಾಗ ಅದಕ್ಕೆ ಅಗತ್ಯದ ಪಟಾಕಿಗಳ  ತಯಾರಿಯಲ್ಲಿ ಕಾರ್ಮಿಕರು ತೊಡಗಿದ್ದರು. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪಟಾಕಿ ತಯಾರಿ ವೇಳೆ ಏಕಾಏಕಿ ಸಂಭವಿಸಿದ ಬೆಂಕಿ ಅನಾ ಹುvದಿಂದಾಗಿ ಅಲ್ಲಿ ತಯಾರಿಸಿಡ ಲಾಗಿದ್ದ ಪಟಾಕಿಗಳು ಸ್ಫೋಟ ಗೊಂಡು ನಾಲ್ವರು ಕಾರ್ಮಿಕರು ಅಲ್ಲೇ ತಕ್ಷಣ ಸಾವನ್ನಪ್ಪಿದ್ದಾರೆ.  ಸತ್ತವರ ಮೃತದೇಹದ ಭಾಗಗಳು ಎಲ್ಲೆಡೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವ. ಅದರಿಂದಾಗಿ  ಗುರುತು ಹಚ್ಚಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ನಡೆದ ವೇಳೆ ಆ ಕಾರ್ಖಾನೆಯಲ್ಲಿ ಹಲವು ಕಾರ್ಮಿಕರಿದ್ದರು. ಗಾಯಗೊಂಡವರನ್ನು ನಾಗಪಟ್ಟಣಂ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

RELATED NEWS

You cannot copy contents of this page