ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಗೋವಾ ನಿರ್ಮಿತ ಮದ್ಯವನ್ನು ಅನಧಿಕೃತವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ 15 ವರ್ಷ ತಲೆಮ ರೆಸಿಕೊಂಡಿದ್ದ ತೃಶೂರು ಜಿಲ್ಲೆಯ ಚಾಲಕ್ಕುಡಿ ನಿವಾಸಿ ದಯಾನಂದನನ್ನು ಉಡುಪಿ ಸಿಇಎನ್ ಪೊಲೀಸರು ಸೆರೆಹಿಡಿದಿದ್ದಾರೆ. 2019ರಲ್ಲಿ ಗೋವಾ ನಿರ್ಮಿತ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಇನ್‌ಸ್ಪೆಕ್ಟರ್ ತಿಮ್ಮಯ್ಯರ ನೇತೃತ್ವದಲ್ಲಿ ಜಿಲ್ಲಾ ಅಬಕಾರಿ ದಳ ಸೆರೆಹಿಡಿದಿತ್ತು. ಇಂದ್ರಾಳಿ ರೈಲ್ವೇ ನಿಲ್ದಾಣ ದಲ್ಲಿ ಈತನನ್ನು ಮೊದಲು ಸೆರೆಹಿಡಿಯ ಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡು ಗಡೆಗೊಂಡು ತಲೆಮರೆಸಿಕೊಂಡಿದ್ದನು.