ತಲೆಹೊರೆ ಕಾರ್ಮಿಕ ಹೃದಯಾಘಾತದಿಂದ ನಿಧನ
ಬದಿಯಡ್ಕ: ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕ ರೊಬ್ಬರು ಹೃದಯಾಘಾತದಿಂದ ನಿಧನಹೊಂ ದಿದರು. ಕಾಡಮನೆ ಮಾಡತ್ತಡ್ಕ ಬಳಿಯ ಮುಚ್ಚಿರ್‌ಕವೆ ನಿವಾಸಿ ಶಂಕರ ಎಂ (56) ಎಂಬ ವರು ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಹೃದಯಾ ಘಾತವುಂಟಾಗಿತ್ತು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಸಂಭವಿಸಿದೆ.
ಕಳೆದ 25 ವರ್ಷಗಳಿಂದ ಬದಿ ಯಡ್ಕ ಪೇಟೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಶಂಕರ ಅವರು ತಲೆಹೊರೆ ಕಾರ್ಮಿಕರ ಯೂನಿಯನ್ (ಸಿಐಟಿಯು)ನ ಸದಸ್ಯನಾಗಿದ್ದಾರೆ. ಕಳೆದ ಶನಿವಾರವೂ ಇವರು ಕೆಲಸ ನಿರ್ವಹಿಸಿದ್ದರು. ನಿನ್ನೆ ಬೆಳಿಗ್ಗೆ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಹೃದಯಾಘಾತವುಂಟಾ ಗಿತ್ತು. ಶಂಕರರ ಅಕಾಲಿಕ ಅಗಲುವಿ ಕೆಯಿಂದ ನಾಡಿನಲ್ಲಿ ಶೋಕ ಮೂಡಿಸಿದೆ.ದಿವಂಗತರಾದ ಚುಕ್ರ-ಮಾಯಿಲು ದಂಪತಿಯ ಪುತ್ರನಾದ ಮೃತರು ಪತ್ನಿ ಪೂರ್ಣಿಮ (ಮಾಡತ್ತಡ್ಕ ಅಂಗನವಾಡಿ ಸಹಾಯಕಿ), ಮಕ್ಕಳಾದ ಮಂಜುನಾಥ, ಮನೀಶ್, ಮಂಜುಷ, ಸಹೋದರ ಬಾಬು (ನಿವೃತ್ತ ತಲೆಹೊರೆ ಕಾರ್ಮಿಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶಂಕರರ ನಿಧನಕ್ಕೆ ತಲೆಹೊರೆ ಕಾರ್ಮಿಕರ ಯೂನಿಯನ್ (ಸಿಐಟಿಯು) ಬದಿಯಡ್ಕ ಘಟಕ ಸಂತಾಪ ಸೂಚಿಸಿದೆ.