ತಾಮರಶ್ಶೇರಿಯಲ್ಲಿ ಭಾರೀ ಪ್ರಮಾಣದ ಎಂಡಿಎಂಎ ವಶ

ಕಲ್ಲಿಕೋಟೆ: ತಾಮರಶ್ಶೇರಿಯಲ್ಲಿ ಭಾರೀ ಪ್ರಮಾಣದ  ಮಾದಕಪದಾ ರ್ಥವನ್ನು ವಶಪಡಿಸಲಾಗಿದೆ. ಚುಡಲಮುಖ್ ಅರೆಟ್ಟಕುನ್ನುಮ್ಮಿಲ್ ಅರೆಕುಂಚಾಲ್‌ನ ಬಾಡಿಗೆ ಮನೆಯಿಂದ  ೧೪೫ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ  ಮಧ್ಯರಾತ್ರಿ ಘಟನೆ ನಡೆದಿದೆ. ಪುಲ್‌ಪರಂಬಿಲ್ ಕುಂಞಿಮೊ ಹಮ್ಮದ್ ಎಂಬವರ ಮಾಲಕತ್ವದ ಲ್ಲಿರುವ ಮನೆಯಲ್ಲಿ ಫತಾಹುಲ್ಲ ಎಂಬಾತ ಬಾಡಿಗೆಗೆ ವಾಸಿಸುತ್ತಿದ್ದನ. ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ತಾಮರಶ್ಶೇರಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇಲ್ಲಿಂದ ಮಾದಕಪದಾರ್ಥ ಪತ್ತೆಹಚ್ಚಲಾಗಿದೆ.  ಪೊಲೀಸರು ತಲುಪಿದ ಕೂಡಲೇ ಆರೋಪಿ ಪೊಲೀಸರಿಗೆ ಆಕ್ರಮಣ ನಡೆಸಿ ಪರಾರಿಯಾಗಿದ್ದಾನೆ.

You cannot copy contents of this page