ತಿಂಗಳುಗಳು ಕಳೆದರೂ ಅಂಡರ್ ಪಾಸ್ ಕೆಲಸ ಮುಗಿದಿಲ್ಲ: ನಯಾಬಜಾರ್‌ನಲ್ಲಿ ಸಂಚಾರ ಸಮಸ್ಯೆ

ಉಪ್ಪಳ: ಅಂಡರ್‌ಪಾಸ್ ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದರೂ ಆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡ ದಿರುವುದು ನಯಾಬಜಾರ್‌ನಲ್ಲಿ ಸಮಸ್ಯೆ ಸೃಷ್ಟಿಸಿದೆ. ಇಲ್ಲಿ ಅಂಡರ್ ಪಾಸ್ ಮೂಲಕ ವಾಹನ ಸಂಚರಿಸದ ಕಾರಣ ಈ ಪ್ರದೇಶದವರಿಗೆ ಸುತ್ತುಬಳಸಿ ಸಂಚರಿಸಬೇಕಾಗುತ್ತಿದೆ. ನಯಾ ಬಜಾರ್‌ನ ಒಂದು ಭಾಗದಲ್ಲಿ ಮಂಗ ಲ್ಪಾಡಿ ತಾಲೂಕು ಆಸ್ಪತ್ರೆ, ವಿಲ್ಲೇಜ್ ಆಫೀಸ್, ಶಿಕ್ಷಣಾಧಿಕಾರಿ ಕಚೇರಿ, ಶಾಲೆಗಳು, ಪಂಚಾಯತ್, ಕ್ಷೇತ್ರ, ಮಸೀದಿ, ಬ್ಯಾಂಕ್‌ಗಳಿದ್ದು, ಇನ್ನೊಂದು ಭಾಗದಲ್ಲಿ ಇನ್ನಿತರ ವಿವಿಧ ಕೇಂದ್ರಗಳು ಕಾರ್ಯಾರಿ ಸುತ್ತಿವೆ. ಆದರೆ ಇಲ್ಲಿಗೆ ತಲುಪಬೇಕಿದ್ದರೆ ಈಗ ಕುಕ್ಕಾರು ಅಥವಾ  ಕೈಕಂಬದ ಅಂಡರ್‌ಪಾಸ್ ಮೂಲಕ ಸಾಗಬೇಕಾಗಿದೆ. ಇದು ಸಮಯ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣ ವಾಗುತ್ತಿದೆ. ಆದ್ದರಿಂದ ನಯಾಬಜಾರ್ ಅಂಡರ್ ಪಾಸ್ ಮೂಲಕ ಶೀಘ್ರ ವಾಹನ ಸಂಚಾರ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page