ತಿರುಪತಿ ಲಡ್ಡು ವಿವಾದ ಸಮಗ್ರ ತನಿಖೆಗೆ ಆದೇಶ

ಅಮರಾವತಿ: ತಿರುಮಲ ತಿರುಪತಿ ಲಡ್ಡು ಪ್ರಸಾದದಲ್ಲಿ  ಪ್ರಾಣಿಗಳ ಕೊಬ್ಬಿನ ಎಣ್ಣೆ ಬಳಸಲಾಗಿದೆ ಎಂಬ ವರದಿಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ  ಮಾಡಿದೆ. ಇದರ ಬೆನ್ನಲ್ಲೇ ಆ ಬಗ್ಗೆ ಸಮಗ್ರ ತನಿಖೆಗಾಗಿ ತಿರುಮಲ ತಿರುಪತಿ ದೇವಸ್ಥಾನದ (ಟಿ.ಟಿ.ಡಿ) ಆದೇಶ ನೀಡಿದೆ. ಟಿ.ಟಿ.ಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್ ಈ ಆದೇಶ ಹೊರಡಿಸಿದ್ದಾರೆ.  ಲಡ್ಡು ಮತ್ತು ಇತರ ಪ್ರಸಾದಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬೆರೆಸಲಾಗಿದೆ ಎಂಬುವುದು ಲ್ಯಾಬ್ ಪರೀಕ್ಷೆಯಲ್ಲಿ ಸಾಬೀತುಗೊಂಡಲ್ಲಿ ಅಂತಹ ತುಪ್ಪಪೂರೈಸುವ ಗುತ್ತಿಗೆದಾರನ ವಿರುದ್ಧ ಹಾಗೂ ಅದರಲ್ಲಿ ಶಾಮೀಲಾಗಿರುವ ಇತರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಶ್ಯಾಮಲ ರಾವ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ತಿರುಪತಿಯಲ್ಲಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳಕೊಬ್ಬು ಮತ್ತು ಮೀನಿನ ಎಣ್ಣೆಯಂತಹ ಅವಶೇಷಗಳಿವೆ ಎಂದು  ಲ್ಯಾಬ್ ವರದಿಗಳು ಈಗಾಗಲೇ ಬಹಿರಂಗಪಡಿಸಿವೆ. ಆ ವರದಿ ಲಭಿಸಿದ ಒಂದು ಗಂಟೆಯೊಳಗೆ ಆ ಬಗ್ಗೆ ತನಿಖೆಗೆ ಟಿ.ಟಿ.ಡಿ ಆದೇಶ ಹೊರಡಿಸಿದೆ.  ಮಾತ್ರ ವಲ್ಲ ತನಿಖೆಗಾಗಿ ಡಾ. ಸುರೇಂದ್ರನಾಥ್, ಡಾ. ವಿಜಯ್ ಭಾಸ್ಕರ್ ರೆಡ್ಡಿ, ಡಾ. ಸ್ವರ್ಣಲತ, ಡಾ. ಮಾಧವನ್ ಎಂಬೀ ನಾಲ್ವರು ಸದಸ್ಯರು ಒಳಗೊಂಡ ಸಮಿತಿಗೂ ರೂಪು ನೀಡಲಾಗಿದೆ.

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಲಾಗಿದೆ ಎಂಬ ವರದಿ ಬಯಲುಗೊಂಡ ಬೆನ್ನಲ್ಲೇ ವಿವಿಧ ಹಿಂದೂ ಸಂಘಟನೆಗಳು ಇನ್ನೊಂದೆಡೆ ತೀವ್ರ ಪ್ರತಿಭಟನೆಗಿಳಿದಿವೆ.

ತಿರುವತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆಯೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿನ್ನೆ ಮೊದಲು ಆರೋಪಿಸಿದ್ದರು. ಆಂಧ್ರದ ಈ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರಕಾರವೇ ಇದಕ್ಕೆ ಕಾರಣವೆಂದೂ ನಾಯ್ಡು ಆರೋಪಿಸಿದ್ದಾರೆ. ಆದರೆ ಇಂತಹ ಆರೋಪವನ್ನು ಈಗ ವಿಪಕ್ಷವಾಗಿರುವ ವೈ.ಎಸ್.ಆರ್. ಕಾಂಗ್ರೆಸ್  ನೇತಾರ, ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅಲ್ಲಗಳೆದಿದೆ.

Leave a Reply

Your email address will not be published. Required fields are marked *

You cannot copy content of this page