ತಿರುವನಂತಪುರದಿಂದ ಅಪಹರಣಗೈದ ವ್ಯಾಪಾರಿಯನ್ನು ಮೊಗ್ರಾಲ್ ರೆಸಾರ್ಟ್‌ನಲ್ಲಿ ದಿಗ್ಬಂಧನ: ಆರೋಪಿಗಳನ್ನು ಬೆನ್ನಟ್ಟಿ ಸೆರೆ

ಮೊಗ್ರಾಲ್: ವ್ಯಾಪಾರ ಸಂಬಂಧ ತರ್ಕದ ಹಿನ್ನೆಲೆಯಲ್ಲಿ ಯುವಕನನ್ನು ಅಪಹರಣಗೈದು ತಂದು ಮೊಗ್ರಾಲ್‌ನ ಖಾಸಗಿ ರೆಸಾರ್ಟ್‌ನಲ್ಲಿ ದಿಬ್ಗಂಧನ ದಲ್ಲಿರಿಸಿದ ತಂಡವನ್ನು ಪೊಲೀಸರು ಗಂಟೆಗಳೊಳಗಾಗಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದೆ. ಸೆರೆಗೀಡಾದವರು ತಿರುವನಂತಪುರ ಆಟಿಂಗಲ್ ನಿವಾಸಿಗಳಾಗಿದ್ದಾರೆ. ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ.

“ತನ್ನ ಪತಿಯನ್ನು ಮೂರು ಮಂದಿ ತಂಡ ಕಾರಿನಲ್ಲಿ ಅಪಹರಿಸಿಕೊಂಡೊ ಯ್ದಿದೆ ಎಂಬ ದೂರಿನೊಂದಿಗೆ ಓರ್ವೆ ಯುವತಿ ಆಟಿಂಗಲ್ ಪೊಲೀಸ್ ಠಾಣೆಗೆ ತಲುಪಿದ್ದಳು. ಯುವಕನನ್ನು ಅಪಹರಣಗೈಯ್ಯಲು ಬಳಸಿದ ಕಾರಿನ ನಂಬ್ರವನ್ನು ಪೊಲೀಸರಿಗೆ ನೀಡಲಾಗಿತ್ತು. ಪೊಲೀಸರು ಜಿ.ಪಿ.ಎಸ್. ವ್ಯವಸ್ಥೆಯ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಕಾರು ಅಪರಿಮಿತ ವೇಗದಲ್ಲಿ ಎರ್ನಾಕುಳಂ ಭಾಗಕ್ಕೆ ಸಂಚರಿಸಿರುವುದಾಗಿ ತಿಳಿದು ಬಂದಿದೆ. ಆರೋಪಿಗಳ ಚಲನವಲನಗಳನ್ನು ಸರಿಯಾಗಿ ತಿಳಿದುಕೊಳ್ಳಲು ಪೊಲೀಸರು ಸೈಬರ್ ಸೆಲ್‌ನ ಸಹಾಯವನ್ನು ಯಾಚಿಸಿದ್ದಾರೆ. ಈ ಮಧ್ಯೆ ಆಟಿಂಗಲ್ ಪೊಲೀಸರು ಮತ್ತೊಂದು ವಾಹನದಲ್ಲಿ ಕಾರನ್ನು ಹಿಂಬಾಲಿಸಿ ತೃಶೂರು, ಕಲ್ಲಿಕೋಟೆ, ಕಣ್ಣೂರು ದಾಟಿದರೂ ಯುವಕನನ್ನೋ, ಆತನನ್ನು ಅಪಹರಿಸಿದ ಕಾರನ್ನೋ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಮರುದಿನ ಮುಂಜಾನೆ ಕಾಸರಗೋಡಿಗೆ ತಲುಪಿ ಹೊಸ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿದ ಕಾರು ಮೊಗ್ರಾಲ್‌ನ್ನು ತಲುಪಿ ಸಮುದ್ರ ಕಿನಾರೆ ಬಳಿಯ ಖಾಸಗಿ ರೆಸಾರ್ಟ್‌ನತ್ತ ಸಂಚರಿಸಿದೆ. ಲೊಕೇಶನ್ ಸರಿಯಾಗಿ ಗುರುತು ಹಚ್ಚಿದ ಪೊಲೀಸರು ಕೂಡಾ ರೆಸಾರ್ಟ್‌ನತ್ತ ಸಾಗಿದ್ದಾರೆ. ತಂಡ ರೆಸಾರ್ಟ್‌ನಲ್ಲಿ ಕೊಠಡಿ ಪಡೆಯಲಿರುವ ಪ್ರಯತ್ನ ವೇಳೆ ಪೊಲೀಸರು ಮೂವರು ಯುವಕರನ್ನು ಸೆರೆ ಹಿಡಿಯಲು ಮುಂದಾದರು. ಆದರೆ ರೆಸಾರ್ಟ್‌ನಿಂದ ಓಡಿದ ತಂಡವನ್ನು ಕುಂಬಳೆ ಪೊಲೀಸರ ಸಹಾಯದೊಂದಿಗೆ ಬೆನ್ನಟ್ಟಿ ಸೆರೆ ಹಿಡಿಯಲಾಯಿತು. ಅನಂತರ ಅಪಹರಣಕ್ಕೀಡಾದ ಯುವಕ ಹಾಗೂ ಆರೋಪಿಗಳನ್ನು ಪೊಲೀಸರು ಮರಳಿ ಕೊಂಡೊಯ್ದರು.

ವ್ಯಾಪಾರ ಸಂಬಂಧ ಉಂಟಾದ ತರ್ಕವೇ ಯುವಕನ ಅಪಹರಣಕ್ಕೆ ಕಾರಣವೆನ್ನಲಾಗಿದೆ. ಯುವಕ ಲಕ್ಷಾಂತರ ರೂಪಾಯಿಗಳನ್ನು ಪಾಲುದಾರನಾದ ವ್ಯಕ್ತಿಗೆ ನೀಡಲು ಬಾಕಿಯಿದೆಯೆಂದು ಹೇಳಲಾಗುತ್ತಿದೆ. ಆದರೆ ಸಿದ್ಧವಾಗದುದರಿಂದ ಅಪಹರಿ ಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಯುವಕನನ್ನು ರೆಸಾರ್ಟ್‌ನಲ್ಲಿ ಒತ್ತಾಸೆಯಲ್ಲಿಟ್ಟು ಒತ್ತಡದ ಮೂಲಕ  ಹಣ ವಸೂಲು ಮಾಡುವುದೇ ತಂಡದ ಗುರಿಯಾಗಿತ್ತೆಂದು ಸಂಶಯಿಸುತ್ತಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ತಿರುವನಂತಪುರ ಜಿಲ್ಲೆಯಿಂದ ಯುವಕನನ್ನು ಅಪಹರಣಗೈದು ಹಲವು ಕಿಲೋ ಮೀಟರ್ ಅತೀ ಸಾಹಸಿಕವಾಗಿ ಕಾರು ಚಲಾಯಿಸಿ ಮೊಗ್ರಾಲ್‌ಗೆ ತಲುಪಿರುವುದು ಯಾಕೆ ಎಂಬ ವಿಷಯದಲ್ಲಿ ನಿಗೂಢತೆ ಹುಟ್ಟಿಕೊಂಡಿದೆ.ಕಾಸರಗೋಡು ಅಥವಾ ಪರಿಸರ ಪ್ರದೇಶದ ಯಾರದ್ದಾದರೂ ಸಹಾಯದಿಂದ ಯುವಕನನ್ನು ಅಪಹರಿಸಲು ನೇತೃತ್ವ ನೀಡಿದವರಿಗೆ ಲಭಿಸಿರಬಹುದೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ

Leave a Reply

Your email address will not be published. Required fields are marked *

You cannot copy content of this page